*ದೇಶದ 25 ಕೋಟಿ ಬಡವರು ಬಡತನದಿಂದ ಮೇಲೆ ಬಂದಿದ್ದಾರೆ – ಜೆ.ಪಿ.ನಡ್ಡಾ*
ಚಿಕ್ಕೋಡಿ ಜಿಲ್ಲಾ ಮಟ್ಟದ ಭೂತ್ ಕಾರ್ಯಕರ್ತರ ಸಮಾವೇಶ
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ಕಮಿಷನ್, ಭ್ರಷ್ಟಾಚಾರ, ಪರಿವಾರವಾದ ಆದರೆ ೨೦೧೪ ರ ನಂತರ ಆತ್ಮವಿಶ್ವಾಸ ಭರವಸೆಯಿಂದ ಬೆಳೆದು ನಿಂತಿದ್ದು ಬಿಜೆಪಿ ಪಕ್ಷ, ರಿಫಾರ್ಮ, ಟ್ರಾನ್ಸ್ಪರ್ಮ, ಫರ್ ಪಾರ್ಮ ಘೋಷಣೆಯೊಂದಿಗೆ ದೇಶವನ್ನು ಪ್ರಧಾನಿ ಮೋದಿಯವರು ಮುನ್ನಡೆಸುತ್ತಿರುವುದರಿಂದ ದೇಶದ ೨೫ ಕೋಟಿ ಬಡವರು ಬಡತನದಿಂದ ಮೇಲೆ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾ ಮಟ್ಟದ ಭೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೀರ ರಾಣಿ ಚನ್ನಮ್ಮ, ರಾಯಣ್ಣರ ಪುಣ್ಯಭೂಮಿಗೆ ನಮಿಸಿ ಈ ನೆಲದ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗ್ಯಶಾಲಿಗಳಿದ್ದಾರೆ ಎಂದರು.
ಬಿಜೆಪಿ ಪಕ್ಷ ವಿಚಾರಗಳಿಂದ ಎಂದು ದೂರವಾಗಿಲ್ಲ, ಬೇರೆ ಪಕ್ಷಗಳು ಸಮಯಕ್ಕೆ ತಕ್ಕ ಹಾಗೆ ತಮ್ಮ ವಿಚಾರಗಳಿಂದ ಬದಲಾಗಿವೆ. ೩೭೦ ಜೆ ಕಾಯ್ದೆ ರದ್ದು ಮಾಡಿ, ರಾಮ ಮಂದಿರ ನಿರ್ಮಾಣದ ಭರವಸೆಗಳನ್ನ ಈಡೇರಿಸಿದ್ದೇವೆ. ಸಬ ಕಾ ಸಾಥ್ ಸಬ್ ಕಾ ವಿಕಾಸ ಮುಂದುವರೆಸಿದ್ದೇವೆ ಮುಸ್ಲಿಂ ಸಹೋದರಿಯರಿಗೆ ಅನ್ಯಾಯವಾಗದಂತೆ ತ್ರಿವಳಿ ತಲಾಕ್ ಜಾರಿ ಮಾಡಲಾಗಿದೆ ಎಂದರು.
ವಿಕಸಿತ ಭಾರತ ಮೂಲಕ ದೇಶದ ಜನರನ್ನ ಜೋಡಿಸುವ ಕೆಲಸವನ್ನ ಪ್ರಧಾನಿ ನರೇಂದ್ರ ಮೋದಿಜಿ ಅವರು ಮಾಡಿದ್ದಾರೆ. ಕೇಂದ್ರದಿAದ ಕರ್ನಾಟಕದಲ್ಲಿ ೪ ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ,೧೧ ಕೋಟಿ ರೈತರಿಗೆ ಪ್ರತಿ ೪ ತಿಂಗಳಿಗೆ ೨ ಸಾವಿರ ನೀಡಿ ಆತ್ಮ ನಿರ್ಭರ ಮಾಡಲಾಗುತ್ತಿದೆ. ಜಲಜೀವನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುತ್ತಿದೆ,ಆಯುಷ್ಮಾನ ಯೋಜನೆ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತಿದೆ,೫ ಲಕ್ಷ ಕೋಟಿ ರೂ ಕರ್ನಾಟಕದ ವಿಕಾಸಕ್ಕೆ ಕೇಂದ್ರದ ಮೋದಿ ಸರಕಾರ ನೀಡಿದೆ
ಬರುವ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗುವದು. ಲೋಕಸಭೆ ಚುನಾವಣೆಗೆ ೧೦೦ ದಿನಗಳು ಗೋಲ್ಡನ್ ಡೇ… ಲೋಕಸಭೆ ಚುನವಾಣೆ ಇನ್ನೇನು ಘೋಷಣೆಯಾಗಲಿದ್ದು ಬೂತ್ ಅಧ್ಯಕ್ಷರು ಹಾಗೂ ಬಿ.ಎಲ್ ೨ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಭೂತ ಅಧ್ಯಕ್ಷರು ಪ್ರತಿ ಮತದಾರರಿಗೆ ಭೇಟಿ ಆಗುವಂತೆ ಮನವಿ ಮಾಡಿ, ಬರುವ ೧೦೦ ದಿನಗಳಲ್ಲಿ ಯಾವ ಮನೆಯೂ ಮಿಸ್ ಆಗದಂತೆ ಮೋದಿ ಸಂದೇಶ ತಲುಪಿಸಬೇಕಿದೆ. ನಾವು ಇಷ್ಟೆಲ್ಲ ಕೆಲಸ ಮಾಡಿದ್ದು ಮೋದಿ ಅವರ ಕಾರ್ಯಗಳ ಸಂದೇಶ ತಲುಪಿಸಬೇಕಿದೆ. ರಾಜ್ಯ ಸರಕಾರ ಜನರಿಗೆ ಯಾವ ರೀತಿ ಮೋಸ ಮಾಡುತ್ತಿದೆ ಎನ್ನುವದನ್ನ ಜನರಿಗೆ ತಲುಪಿಸಬೇಕಿದೆ .ಉಚಿತವಾಗಿ ರಾಜ್ಯದ ಜನರಿಗೆ ಭಯೋತ್ಪಾದಕತೆ ಸಿಗುತ್ತಿದೆ ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ ಘೋಷಣೆ ಕೇಳುತ್ತಿದ್ದರೂ ಸಿಎಂ, ಡಿಸಿಎಂ ಮೌನರಾಗಿದ್ದಾರೆ.
ಭಾರತ ಜೋಡೋ ಯಾತ್ರೆ ಎಂದರೇ ಇದೇನಾ..?
ಸಂಸದ ಗೆದ್ದರೇ ಪಾಕಿಸ್ತಾನ ಪರ ಘೋಷಣೆ ಕೂಗಲಾಗುತ್ತಿದೆ ಖರ್ಗೆ ಅವರೇ ನೀವು ಯಾಕೆ ಸುಮ್ಮನಿದ್ದೀರಿ, ರಾಜ್ಯದ ಜನರು ನಿಮ್ಮನ್ನ ಪ್ರಶ್ನೆ ಮಾಡುತ್ತಿದ್ದಾರೆ. ಭಾರತ ಮಾತೆ ಕರ್ನಾಟಕದ ಜನರು ನಿಮ್ಮನ್ನು ಎಂದೂ ಕ್ಷಮಿಸುವದಿಲ್ಲ ರಾಜ್ಯದಲ್ಲಿ ಬ್ಲಾಸ್ಟ್ಗಳು ಆರಂಭವಾಗಿವೆ. ಆತಂಕವಾದಿಗಳ ಪರ ನರಮ್ ಆಗಿದೆ.
ಹಿಂದೂ ಮಂದಿರಗಳ ಮೇಲೆ ೧೦% ಟ್ಯಾಕ್ಸ್ ಹೇರಲಾಗಿದ್ದು ಈ ಹಣ ತುಷ್ಟೀಕರಣದ ಕೆಲಸ ಮಾಡಿದೆ. ರಾಜ್ಯ ಸರಕಾರ ಎಟಿಎಮ್ ಸರಕಾರ ಆಗಿದ್ದು ರಾಜ್ಯದ ಭ್ರಷ್ಟಾಚಾರದ ಹಣ ದೆಹಲಿಯ ಜೋಳಿಗೆ ತುಂಬುತ್ತಿದೆ. ರಾಜ್ಯ ಸರಕಾರ ಭ್ರಷ್ಟಾಚಾರದ, ತುಷ್ಟೀಕರಣದ ಪರ ನಿಂತಿದೆ ಎಂದು ಆರೋಪಿಸಿದರು.
ಸಮಾವೇಶವನ್ನ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ಮೋದಿ ಕಳೆದ ೧೦ ವರ್ಷಗಳಿಂದ ಮಾಡಿರುವ ಕಾರ್ಯವನ್ನ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ಚಿಕ್ಕೋಡಿಯಿಂದಲೇ ಬರುವ ಚುನಾವಣೆಯ ಕಹಳೆಯನ್ನು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಘೋಷಿಸಿರುವುದು ಶ್ಲಾಘನೀಯ ಎಂದರು.
ದೇಶವನ್ನ ೨೦೦೬ ರಿಂದ ೨೦೧೪ ರ ವರೆಗೆ ಯುಪಿಎ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು ,ಒಂದು ಕಡೆ ಮೋದಿ ಯುಪಿಎ ಕೂಟ ಮತ್ತೊಂದೆಡೆ ಭ್ರಷ್ಟಾಚಾರದ ಪರ ಇಂಡಿಯಾ ಕೂಟ ಇದೆ. ರಾಜ್ಯ ಕಾಂಗ್ರೆಸ್ ಸರಕಾರ ಕೇಂದ್ರದಿಂದ ಅನ್ಯಾಯ ಆಗಿದೆ ಎಂದು ಬಿಂಬಿಸಲಾಗುತ್ತಿದೆ. ೬೫ ಸಾವಿರ ಕೋಟಿ ಮಾತ್ರ ಯುಪಿಎ ಸರಕಾರ ನೀಡಿತ್ತು. ಆದರೆ ಮೋದಿಯವರ ಆಡಳಿತ ಬಂದ ಮೇಲೆ ಸರಕಾರ ೨ ಲಕ್ಷ ೮೬ ಸಾವಿರ ಕೋಟಿ ರೂ ನೀಡಿದೆ.
೧೫ ಸಾವಿರ ಕೋಟಿ ರೇಲ್ಷೆ ಡಬಲಿಂಗ್ ಗಾಗಿ ನೀಡಿದೆ. ಕಿಸಾನ್ ಸಮ್ಮಾನ ಮೂಲಕ ೫೦ ಲಕ್ಷ ರೈತರಿಗೆ ನೆರವಾಗಿದೆ. ರಾಜ್ಯ ಕಾಂಗ್ರೆಸ್ ಬಡವರ,ರೈತರ, ಮಹಿಳಾ ವಿರೋಧಿ, ದಲಿತ ವಿರೋಧಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡದೇ ಹೊಸ ದಾಖಲೆ ಸೃಷ್ಟಿ ಮಾಡಿದೆ.
ರಾಜ್ಯದಲ್ಲಿ ಬರ ಇದ್ದರೂ, ೮೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಅನುದಾನ ನೀಡಿಲ್ಲ, ರೈತರಿಗೆ ಪರಿಹಾರ ನೀಡದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ನೀಡುತ್ತೇನೆ ಎಂದು ಸಿಎಂ ಹೇಳಿರುವುದು ನಾಚಿಕೆಗೇಡು ಸಂಗತಿ ಎಂದರು.
ಪಶು ಆಸ್ಪತ್ರೆಗೆ ಹಿಂದೂಗಳು ನೀಡಿದ ಎರಡು ಎಕರೆ ಜಮೀನನ್ನ ಜಮೀರ ಅಹಮ್ಮದ ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡಲು ಸರಕಾರ ಆದೇಶ ನೀಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ತಕ್ಕ ಉತ್ತರ ಲೋಕಸಭೆಯಲ್ಲಿ ಚುನಾವಣೆಯಲ್ಲಿ ನೀಡಬೇಕಿದೆ ಎಂದರು.
ಬಿಜೆಪಿ ಹೋರಾಟದ ಬಳಿಕ ಪಾಕಿಸ್ತಾನದ ಪರ ಘೋಷಣೆ ಮಾಡಿದ ಮೂರು ಜನರನ್ನ ಅರೆಸ್ಟ್ ಮಾಡಿದ್ದಾರೆ. ರಾಜ್ಯ ಸಭೆಯ ಸದಸ್ಯ ನಾಸೀರ ಮೇಲೆ ಅಪರಾಧಿ ಎಂದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದ ೨೮ ಕ್ಷೇತ್ರಗಳನ್ನು ಜೆಡಿಎಸ್ -ಬಿಜೆಪಿ ಒಗ್ಗಟ್ಟಾಗಿ ಗೆಲ್ಲಬೇಕು ಎನ್ನುವ ಶಪಥ ಮಾಡಿದ್ದೇವೆ. ರಾಜ್ಯದ ಎಲ್ಲ ಕ್ಷೇತ್ರಗಳನ್ನ ಬಿಜೆಪಿ – ಜೆಡಿಎಸ್ ಸೇರಿ ಗೆದ್ದು ಮೋದಿ ಅವರಿಗೆ ಅರ್ಪಣೆ ಮಾಡುತ್ತೇವೆ ಎಂದು ನಡ್ಡಾ ಅವರಿಗೆ ವಿಜಯೇಂದ್ರ ಭರವಸೆ ನೀಡಿದರು.
ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ ಅಗರವಾಲ್, ಸಂಸದ ಅಣ್ಣಾಸಾಹೇಬ ಜೊಲ್ಲೆ, ಡಿ.ಎಂ.ಐಹೊಳೆ, ಮಾಜಿ ಸಂಸದ ರಮೇಶ ಕತ್ತಿ, ಶಾಸಕಿ ಶಶಿಕಲಾ ಜೊಲ್ಲೆ, ಅಮೀತ ಕೋರೆ, ಲಖನ ಕತ್ತಿ, ಮಹಾಂತೇಶ ಕವಟಗಿಮಠ, ರಾಜೇಶ ನೇರ್ಲಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ಅಭಯ ಪಾಟೀಲ. ಮಹೇಶ ಕುಮಟೋಳ್ಳಿ. ವಿಭಾಗೀಯ ಪ್ರಭಾರಿ ಬಸವರಾಜ ಯಕ್ಕಂಚಿ. ಡಾ.ರಾಜೇಶ ನೇರ್ಲಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ