ಪ್ರಗತಿವಾಹಿನಿ ಸುದ್ದಿ: ವಕೀಲ, ಬಿಗ್ ಬಾಸ್ ಸ್ಪರ್ಧಿ ಜಗದೀಸ್ ಅವರ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ತಡರಾತ್ರಿ ಗುಂಪೊಂದು ಅವರ ಕಾರಿನ ಮೇಲೆ ಏಕಏಕಿ ದಾಳಿ ನಡೆಸಿ, ಹಲ್ಲೆ ನಡೆಸಿದೆ.
ಜಗದೀಶ್ ನಿನ್ನೆಯಷ್ಟೇ ದರ್ಶನ್ ಅಭಿಮಾನಿಗ್ಳು ನನ್ನ ಬಳಿ ಬರುವಾಗ ವಿಮೆ ತೆಗೆದುಕೊಂಡು ಬನ್ನಿ ಎಂದು ಆವಾಜ್ ಹಾಕಿದ್ದರು. ಇದಾದ ಬಳಿಕ ರ್ರಾತ್ರಿ ಗುಂಪೊಂದು ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಮಾಡಿದೆ. ದೊಣ್ಣೆ, ಕೋಲು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದೆ. ಕಾರಿನ ಗಾಜನ್ನು ಪೀಸ್ ಪೀಸ್ ಮಾಡಿದ್ದಾರೆ. ಜಗದೀಶ್ ಕೂಡ ಗಾಯಗೊಂಡಿದ್ದು, ರಕ್ತ ಸಿಕ್ತವಾದ ಮುಖದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ.
ಜಗದೀಶ್ ಕರಿನ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಕೂಡ ವೈರಲ್ ಆಗಿದೆ. ಜಗದೀಶ್ ಮೂಗಿನಿಂದ ರಕ್ತ ಸುರಿಯುತ್ತಿದ್ದು, ಅದೇ ಸ್ಥಿತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಇಡೀ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ. ಇದೇನಾ ಕರ್ನಾಟಕಾ? ಸಿಎಂ ಸಿದ್ದರಾಮಯ್ಯನವರೇ ಏನು ಮಾದುತ್ತಿದ್ದೀರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ