ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಶೆಟ್ಟರ್ ಪುತ್ರ ಹಾಗೂ ಸೊಸೆ ಗಾಯಗೊಂದಿರುವ ಘಟನೆ ದಾವಣಗೆರೆಯ ಹಳೇ ಕುಂದವಾಡದಲ್ಲಿ ನಡೆದಿದೆ.
ಪ್ರಶಾಂತ್ ಶೆಟ್ಟರ್ ಹಾಗೂ ಪತ್ನಿ ಅಂಚಲ್ ಚಲಿಸುತ್ತಿದ್ದ ಲ್ಯಾಂಡ್ ರೋವರ್ ಕಾರಿಗೆ ಲಾರಿ ಡಿಕ್ಕಿಹೊಡೆದಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅನಾಹುತದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾವಣೆಗೆರೆಯಿಂದ ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ