Belagavi NewsBelgaum NewsKannada NewsKarnataka NewsPolitics

*ರಾಷ್ಟ್ರ ಹಾಗೂ ರಾಜ್ಯ ರಾಜಧಾನಿಗೆ ಬೆಳಗಾವಿಯಿಂದ ದಿನನಿತ್ಯ ಹಾರಲಿದೆ ಇಂಡಿಗೋ ವಿಮಾನ: ಸಂಸದ ಜಗದೀಶ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ – ದೆಹಲಿ ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬರುವ 16 ಸೆಪ್ಟೆಂಬರ್ 2025 ರಂದು ಮತ್ತು  21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಇಂಡಿಗೋ ಬೆಳಗಾವಿ – ದೆಹಲಿ ನಡುವಿನ ತನ್ನ ಸಂಚಾರವನ್ನು ಎರಡು ದಿನಗಳಿಗೊಮ್ಮೆ ನಡೆಸುತ್ತಿತ್ತು ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬೆಳಗಿನ ಸಂಚಾರವನ್ನು ರದ್ದು ಮಾಡಲಾಗಿದ್ದು ಇಲ್ಲಿ ಸ್ಮರಣಿಯ.

ಇಂಡಿಗೋ ವಿಮಾನಯನ ಅಧಿಕಾರಯೊಂದಿಗೆ ಸಭೆ ನಡೆಸಿ, ಒತ್ತಾಯ ಮಾಡಿ, ಈ ಕ್ರಮ ಜರುಗಿಸಿದ ಬಗ್ಗೆ  ಸಂಸದರಾದ ಜಗದೀಶ ಶೆಟ್ಟರ್ ತಮ್ಮ ಸಂತಸ ವ್ಯಕ್ತ ಪಡಿಸಿದ್ದು, ಇಂಡಿಗೋ ವಿಮಾನಯಾನ ಅಧಿಕಾರಿಗಳಿಗೆ ತಮ್ಮ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button