Latest

*ಪತಿ ಜಗದೀಶ್ ಶೆಟ್ಟರ್ ನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಶಿಲ್ಪಾ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕಾಂಗ್ರೆಸ್ ಸೇರ್ಪಡೆ ಬಳಿಕ ಹುಬ್ಬಳ್ಳಿಯ ನಿವಾಸಕ್ಕೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಂಡು ಪತ್ನಿ ಶಿಲ್ಪಾ ಶೆಟ್ಟರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Home add -Advt

ಕಾಂಗ್ರೆಸ್ ಸೇರ್ಪಡೆ ನಂತರ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ ಜಗದೀಶ್ ಶೆಟ್ಟರ್, ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ಪತಿ ಜಗದೀಶ್ ಶೆಟ್ಟರ್ ಅವರನ್ನು ಕಂಡು ಕಣ್ಣೀರಿಟ್ಟ ಶಿಲ್ಪಾ ಶೆಟ್ಟರ್, ಪತಿಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪತ್ನಿ ಕಣ್ಣೀರು ಕಂಡು ಜಗದೀಶ್ ಶೆಟ್ಟರ್ ಕೂಡ ಭಾವುಕರಾಗಿದ್ದು, ಕಣ್ಣೀರ ನಡುವೆಯೇ ಪತ್ನಿಯನ್ನು ಸಮಾಧಾನಪಡಿಸಲೆತ್ನಿಸಿದ್ದಾರೆ.

ಈ ವೇಳೆ ಜಗದೀಶ್ ಶೆಟ್ಟರ್ ದಂಪತಿಯನ್ನು ಬೆಂಬಲಿಗರು, ಅಭಿಮಾನಿಗಳು ಸಂತೈಸಿದ ಘಟನೆ ನಡೆದಿದೆ.

https://pragati.taskdun.com/bjp-candidate-listprahlad-joshihubli-dharwad/

Related Articles

Back to top button