Kannada NewsKarnataka News

ಶೆಟ್ಟರ್ ಬರುತ್ತಿದ್ದಾರೆ ಉದ್ಯಮಬಾಗ್ ನೋಡಲು!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯ ಕೈಗಾರಿಕೆ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ಮಂಗಳವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಳಗಾವಿಯ ಪ್ರಮುಖ ಕೈಗಾರಿಕೆ ಪ್ರದೇಶವಾದ ಉದ್ಯಮಬಾಗ್ ಪರಿಸ್ಥಿತಿ ಅವಲೋಕಿಸಲು ಅವರು ಆಗಮಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸುತ್ತಿದ್ದ  ವೇಳೆ ಬೆಳಗಾವಿ ಕೈಗಾರಿಕೆ ಪ್ರದೇಶವನ್ನೊಮ್ಮೆ ನೋಡುವಂತೆ ಶಾಸಕ ಅಭಯ ಪಾಟೀಲ ಮತ್ತು ಕೈಗಾರಿಕೊದ್ಯಮಿಗಳು ಒತ್ತಾಯಿಸಿದ್ದರು. ಇನ್ನು 15 ದಿನದೊಳಗೆ ಬಂದು ನೋಡುವುದಾಗಿ ಶೆಟ್ಟರ್ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮಂಗಳವಾರ ಆಗಮಿಸುತ್ತಿದ್ದಾರೆ. ಈ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿಯ ಹೊಣೆಯೂ ಅವರ ಹೆಗಲೇರಿದೆ.

ಮಧ್ಯಾಹ್ನ 12.30ಕ್ಕೆ ಉದ್ಯಮಬಾಗ್ ಪ್ರದಶಕ್ಕೆ ಆಗಮಿಸುವ ಅವರು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ನಂತರ ವಾಣಿಜ್ಯೋದ್ಯಮ ಸಂಗದ ಸಭಾಭವನದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಿ ಅವರ ಅಹವಾಲು ಆಲಿಸಲಿದ್ದಾರೆ.

ಬೆಳಗಾವಿಯ ಉದ್ಯಮಬಾಗ್ ಪ್ರದೇಶವನ್ನು ಇತ್ತೀಚಿಗೆ ಸುತ್ತುಹಾಕಿದ್ದ ಶಾಸಕ ಅಭಯ ಪಾಟೀಲ, ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ ಅವರು ಜದೀಶ್ ಶೆಟ್ಟರ್ ಮೇಲೆ ಒತ್ತಡ ತಂದು ಅವರನ್ನು ಕರೆಸುತ್ತಿದ್ದಾರೆ.

ಜಗದೀಶ್ ಶೆಟ್ಟರ್ ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆ ಕುರಿತು ಜನಪ್ರತಿನಿಧಿಗಳೊಂದಿಗೆೆ ಸಭೆ ನಡೆಸಲಿದ್ದಾರೆ. ಇದಾದ ನಂತರ 4 ಗಂಟೆಗೆ ಕಿತ್ತೂರಿಗೆ ತೆರಳಿ ಕಿತ್ತೂರು ಉತ್ಸವದ ಪೂರ್ಭಾವಿ ಸಭೆಯಲ್ಲಿ ಪಾಲ್ಗೊಳ್ಳುವರು.

“ಅವಳಿ”ಗೆ ಬೆಳಗಾವಿ ಸೇರಿಸಿ ತ್ರಿವಳಿ ನಗರ ಅಭಿವೃದ್ಧಿ -ಶೆಟ್ಟರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button