ಜಗದೀಶ್ ಶೆಟ್ಟರ್ ಗೆ ಘೆರಾವ್ ಹಾಕಿ ವಾಪಸ್ ಕಳಿಸಿದ ಬಿಜೆಪಿ ಕಾರ್ಯಕರ್ತರು!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೋಮವಾರ ರಾಮದುರ್ಗ ತಾಲೂಕಿನ್ಯಾದ್ಯಂತ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಚಿಕ್ಕರೇವಣ್ಣ ಬೆಂಬಲಿಗರು ಜಗದೀಶ್ ಶೆಟ್ಟರ್ ಅವರನ್ನು ಘೆರಾವ್ ಹಾಕಿರುವ ಘಟನೆ ನಡೆದಿದೆ.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಜೊತೆಗೆ ಕರೆದುಕೊಂಡು ಹೋಗಿ, ಚುನಾವಣಾ ಪ್ರಚಾರಕ್ಕೆ ಚಿಕ್ಕರೇವಣ್ಣ ಅವರನ್ನು ಬಿಟ್ಟು ಹೋಗಿದ್ದಕ್ಕೆ ಶೆಟ್ಟರ್ ಅವರನ್ನು ಘೆರಾವ್ ಹಾಕಿ ಆಕ್ರೋಶಗೊಂಡಿದ್ದಾರೆ. ಚಿಕ್ಕರೇವಣ್ಣ ಅವರನ್ನು ಕರೆದುಕೊಂಡು ಊರಿಗೆ ಮತ ಕೇಳಲು ಬನ್ನಿ ಅಂತಾ ಆಕ್ರೋಶ ಹೊರ ಹಾಕಿ ಶೆಟ್ಟರ್ ಅವರನ್ನು ಕಾರಿನಿಂದ ಕೆಳಗೆ ಇಳಿಸದೇ ವಾಪಾಸ್ ಕಳುಹಿಸಿದ್ದಾರೆ. ಈ ವೇಳೆ ಎಂಎಲ್ಸಿ ಹನುಮಂತ ನಿರಾಣಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ತೀವ್ರ ಮುಜುಗರಕ್ಕೆ ಒಳಗಾಗಿ ಜಗದೀಶ ಶೆಟ್ಟರ್ ಅವರು ವಾಪಾಸ್ ತೆರಳಿದ್ದಾರೆ. ಈ ಮೂಲಕ ರಾಮದುರ್ಗದಲ್ಲಿ ಹಾದೇವಪ್ಪ ಯಾದವಾಡ ಹಾಗೂ ಚಿಕ್ಕರೇವಣ್ಣ ಬೆಂಬಲಿಗರ ನಡುವೆ ಸಮಾಧಾನ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ