ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿ, ಜಗದೀಶ್ ಶೆಟ್ಟರ್ ಗೆ ಉನ್ನತ ಸ್ಥಾನ ಸಿಗಲಿದೆ: ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆ ಆಗಲಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನ ಸಿಗಲಿದೆ. ಆಗ ನಾವು ಕೇಂದ್ರದ ಅನೇಕ ಯೋಜನೆಗಳನ್ನು ಹಾಗೂ ಅನೇಕ ಮಹತ್ವದ ಕೇಲಸಗಳನ್ನು ನಮ್ಮ ಕ್ಷೇತ್ರಕ್ಕಾಗಿ ಮಾಡಿಸಬಹುದು. ಹಾಗಾಗಿ ಜಗದೀಶ ಶೆಟ್ಡರ್ ಅವರನ್ನು ದೆಹಲಿಗೆ ಕಳುಹಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಅಂಗವಾಗಿ ಮೂಡಲಗಿ ಮತಕ್ಷೇತ್ರದ ಮೇಳವಂಕಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಏನೇ ಹೇಳಿದರರೂ ನೀವು ಬಿಜೆಪಿಗೆ ಮತ ನೀಡಬೇಕು. ಬರಗಾಲದ ಸಂದರ್ಭದಲ್ಲೂ ನಮ್ಮ ಕ್ಷೇತ್ರದಲ್ಲಿ ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಮುಂದಿನ 10 ದಿನ ಹೊಳೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗುವುದು. ಬೇರೆ ಬೇರೆ ಅಭಿವೃಧ್ಧಿ ಕೆಲಸಗಳು ಸಾಕಷ್ಟು ಆಗಿದೆ. ಮುಂದೆ ಕೂಡಾ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ಅನ್ಯೋನ್ಯವಾಗಿ ಇದ್ದೇವೆ. ಬಸವಣ್ಣನವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಇರುತ್ತಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಅವರು ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಅವರ ನೇತೃದಲ್ಲಿ ಮೂಡಲಗಿ- ಅರಬಾವಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗಿದೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಿದ್ದಾರೆ. ನನಗೆ ರಾಜಕೀಯವಾಗಿ 30 ವರ್ಷಗಳ ಅನುಭವ ಇದೆ. ಹಾಗಾಗಿ ಯುವಕರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಕೃಷಿಗೆ ಸಂಬಂಧಿಸಿದ ಅನೇಕ ಬಲದಲಾವಣೆ ಮಾಡೋಣ. ಎಲ್ಲೇ ನೋಡಿದರೂ ಬೆಳಗಾವಿ ಹೆಸರು ಬರಬೇಕು, ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದರು.
ಮಹಾಂತೇಶ್ ಕವಟಗಿಮಠ್ ಮಾತನಾಡಿ, ಮಾ. ೭ ನಡೆಯುವ ಚುನಾವಣೆ ಐತಿಹಾಸಿಕ ಚುನಾವಣೆ, ದೇಶದ ನಾಯಕತ್ವ ನಿರ್ಧರಿಸುವ ಚುನಾವಣೆ ಆಗಿದೆ. ಕಳೆದ ೧೦ ವರ್ಷದಲ್ಲಿ ನರೇಂದ್ರ ಮೋದಿಯವರು ವಿವಿಧ ಜನಪರ ಯೋಜನೆಗಳುನ್ನು ನೀಡಿ, ನಾವು ಸ್ವಾಭಿಮಾನದಿಂದ ಬದುಕಲು ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಡಿ ವಿಶ್ವ ತತ್ತರಿಸಿತು. ನಾವು ಒಟ್ಟಾಗಿ ಕೋವಿಡ್ ಎದುರಿಸಲು ಸಂಕಲ್ಪ ಮಾಡಿ, ಎಲ್ಲರಿಗೂ ಕೋವಿಡ್ ಲಸಿಕೆ ನೀಡಿದ್ದಾರೆ. ಬೆಳಗಾವಿಯ 8 ವಿಧಾನ ಸಭಾ ಕ್ಷೇತ್ರದಲ್ಲಿ ಮೂಡಲಗಿ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಲೀಡ್ ನೀಡಬೇಕು. ಜಗದೀಶ್ ಶೆಟ್ಟರ್ ಆಯ್ಕೆ ಮಾಡುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರ ನಾಯಕತ್ವ ಕಟ್ಟಿಗೊಳಿಸಬೇಕು ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶುಭಾಸ ಪಾಟೀಲ್, ಮಂಡಳ ಅಧ್ಯಕ್ಷ ಮಹಾದೇವಪ್ಪ ಶೇಕಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ