Wanted Tailor2
Cancer Hospital 2
Bottom Add. 3

*ಭಾರತೀಯ ಸಂಸ್ಕೃತಿ ವಿಶ್ವದ ಅತ್ಯುತ್ತಮ ಸಂಸ್ಕೃತಿ: ಸುನಿಲ ಘನವಾತ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವದ ಎಲ್ಲ ಸಂಸ್ಕೃತಿಗಳನ್ನು ಹೋಲಿಸಿದರೆ ಭಾರತೀಯ ಸಂಸ್ಕೃತಿ ಅತ್ಯುತ್ತಮ ಸಂಸ್ಕೃತಿಯಾಗಿದ್ದು, ಈ ಸಂಸ್ಕೃತಿಯನ್ನು ಪ್ರತಿಯೊಂದು ದೇಶ ಅಳವಡಿಸಿಕೊಂಡಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡಬಹುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಪೂಣೆಯ ಖ್ಯಾತ ಪ್ರವಚನಕಾರ ಸುನಿಲ ಘನವಾತ ಅಭಿಪ್ರಾಯಪಟ್ಟರು.

ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಜಿತೋ ಲೇಡಿಸ್ ವಿಂಗ್ ವತಿಯಿಂದ ಮನೋಜ ಸಂಚೇತಿ ಜಿತೋ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಭಾರತೀಯ ಸಂಸ್ಕೃತಿ ಇಂದು ವಿಶ್ವವ್ಯಾಪಿ ಹರಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿನ ಔಷಧೋಪಚಾರ ಪದ್ದತಿ, ಆರ್ಯುವೇದ ಪದ್ದತಿಗಳನ್ನು ದಿನೆ ದಿನೆ ಹೆಚ್ಚಿನ ಪ್ರಚಾರ ಪಡೆಯುತ್ತಿವೆ. ಪ್ರತಿಯೊಬ್ಬರ ಜೀವನದಲ್ಲಿ ಭಾರತೀಯ ಸಂಸೃತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ಭಾರತಿಯ ಆಹಾರ ಪದ್ದತಿಯೂ ಸಹ ವಿಶ್ವದ ಮಾನ್ಯತೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ನಾವು ಭಾರತಿಯರು ಪಾಶ್ಚಾತ್ಯ ಸಂಸೃತಿಯ ಮೋಹಕ್ಕೆ ಒಳಗಾಗದೇ ನಮ್ಮದೇ ಆದ ಸಂಸೃತಿಯನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿತೋ ಮೇನ ವಿಂಗ್ ಅಧ್ಯಕ್ಷ ವೀರಧವನ ಉಪಾಧ್ಯೆ ಅವರು ವಹಿಸಿದ್ದರು. ಕಮಲಾ ಗಾದಿಯಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಜಿತೋ ಲೇಡಿಸ್ ವಿಂಗ ಅಧ್ಯಕ್ಷೆ ಮಾಯಾ ಜೈನ್ ಅತಿಥಿಗಳನ್ನು ಸ್ವಾಗತಿಸಿದರು. ತೃಪ್ತಿ ಮಾಂಗಲೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಹರ್ಷಿತಾ ಮೆಹತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯದರ್ಶಿ ಮಮತಾ ಜೈನ್ ವಂದಿಸಿದರು.

Bottom Add3
Bottom Ad 2

You cannot copy content of this page