*ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಮಾಡಿದ ಬೆಳಗಾವಿ ಮೂಲದ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ್*
ಪ್ರಗತಿವಾಹಿನಿ ಸುದ್ದಿ: ಜೈನ ಸನ್ಯಾಸಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತದ ಮೂಲಕ ದೇಹ ತ್ಯಾಗ ಮಾಡುವ ಮೂಲಕ ಸಮಾಧಿಯಾಗಿದ್ದಾರೆ.
ಛತ್ತೀಸ್ ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ವ್ರತದ ಮೂಲಕವಾಗಿ ದೇಹತ್ಯಾಗ ಮಾಡಿದ್ದಾರೆ. ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಆಹಾರ, ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.
ತಮ್ಮ ಕೊನೇ ಉಸಿರಿರುವವರೆಗೂ ಜಾಗೃತರಾಗಿದ್ದ ಶ್ರೀಗಳು ಮಂತ್ರಗಳನ್ನು ಪಠಿಸುತ್ತಲೇ ದೇಹತ್ಯಾಗ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಜೈನ ಮುನಿಗಳ ಅಂತ್ಯ ಸಂಸ್ಕಾರ ನೆರವೇರಲಿದೆ.
ದೇಶಾದ್ಯಂತ ಆಚಾರ್ಯ ಶ್ರೀಗಳ ಭಕ್ತರು ಗೌರವಾರ್ಥವಾಗಿ ಇಂದು ತಮ್ಮ ಸಂಘ-ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.
ಆಚಾರ್ಯ ವಿದ್ಯಾಸಾಗರ ಶ್ರೀಗಳು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಅಕ್ಟೋಬರ್ 10, 1946ರಂದು ಜನಿಸಿದ್ದರು 1938ರಲ್ಲಿ ರಾಜಸ್ಥಾನದ ಅಜ್ಮಿರ್ ನಗರದಲ್ಲಿ ಆಚಾರ್ಯ ಶ್ರೀ ಜ್ಞಾನಸಾಗರ್ ಜಿ ಅವರಿಂದ ಮುನಿದೀಕ್ಷೆಯನ್ನು ಪಡೆದರು. ಶ್ರೀಗಳ ಕಠಿಣ ತಪಸ್ಸು ಕಂದು ಜ್ಞಾನಸಾಗರ ಮಹರಾಜ್ ಶ್ರೀ ವಿದ್ಯಾಸಾಗರ್ ಅವರಿಗೆ ಆಚಾರ್ಯ ಹುದ್ದೆ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ