Kannada NewsKarnataka News

ಡಾ. ಸೋನಾಲಿ ಸರ್ನೋಬತ್ ರಾಜಕೀಯ ಪ್ರಯಾಣಕ್ಕೆ ಜೈನಮುನಿಗಳ ಹಾರೈಕೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಜೈನ ಧರ್ಮವು ಅಹಿಂಸಾ ಪರಮೋಧರ್ಮ ಎಂಬುದನ್ನು ಬಲವಾಗಿ ನಂಬುತ್ತದೆ‌ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಹೇಳಿದರು.

ಖಾನಾಪುರ ತಾಲೂಕಿನ ಕೊಡಚವಾಡದಲ್ಲಿ 108 ಪರಸಂಸಾಗರ ಮುನಿ ಮಹಾರಾಜರ ಚಾತುರ್ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಹಿಂಸೆಯ ಬಗ್ಗೆ ನಂಬಿಕೆ ಇಟ್ಟಿರುವ ಜೈನ ಧರ್ಮ ಬದುಕಿನಲ್ಲಿ ಶಾಂತಿಯ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂದರು. ಬಳಿಕ ಡಾ. ಸೋನಾಲಿ ಸರ್ನೋಬತ್ ಅವರು ನಮೋಕಾರ ಮಹಾಮಂತ್ರ ಜಪಿಸಿದರು.
ಡಾ. ಸೋನಾಲಿ ಅವರ ರಾಜಕೀಯ ಕ್ಷೇತ್ರದ ಕಾರ್ಯಗಳಿಗೆ ಜೈನ ಮುನಿಗಳು ಶುಭ ಹಾರೈಸಿದರು‌.

ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರಾದ ರವಿ ಹಟ್ಟಿಹೊಳಿ, ಬರತೇಶ ಉಪಾಧ್ಯೆ, ಮಹಾವೀರ ಹುಡೇದ, ರಾಜು ಕೊಚೇರಿ, ರಾಜು ಸಾಗರ್, ಪಾರಿಶಾ ಹಾರೋಗೊಪ್ಪ, ನವೀನ್ ಕೊಚೇರಿ, ಬಾಹುಬಲಿ ಅಜ್ಜನ್ನವರ್, ಭರತೇಶ ಕಂಚಿ, ರವಿ ಚೌಗಲಾ ಸೇರಿದಂತೆ ಸ್ಥಳೀಯ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು‌.

Home add -Advt

ಚಿಕ್ಕೋಡಿಯಲ್ಲಿ ಸೋಮವಾರ ಬಿಜೆಪಿ ಸಂಕಲ್ಪ ಸಮಾವೇಶ

https://pragati.taskdun.com/belgaum-news/bjp-sankalpa-samavesha-in-chikkodi-on-monday/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button