Latest

ಮೊದಲ ರಾತ್ರಿ ಹೆಂಡತಿಗಾಗಿ ಕಾದು ಕುಳಿತಿದ್ದ ಗಂಡನಿಗೆ ಶಾಕ್

ಪ್ರಗತಿವಾಹಿನಿ ಸುದ್ದಿ; ಜೈಪುರ: ನೂರಾರು ಕನಸುಗಳನ್ನು ಹೊತ್ತು ವಿವಾಹವಾಗಿದ್ದ ವರನಿಗೆ ಮೊದಲ ರಾತ್ರಿಯೇ ಪತ್ನಿ ಶಾಕ್ ನೀಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಜೈಪುರದ ಯುವಕನಿಗೆ ಮನೆಯವರೆ ಗೊತ್ತುಮಾಡಿದ್ದ ಯುವತಿಯೊಂದಿಗೆ ವಿವಾಹವಾಗಿತ್ತು. ಮದುವೆಯ ಮೊದಲ ರಾತ್ರಿ ಹೆಂಡತಿಗಾಗಿ ಕಾದು ಕುಳಿತಿದ್ದ ಮದುಮಗನಿಗೆ ಹಾಲಿನ ಲೋಟದೊಂದಿಗೆ ಬಂದ ಪತ್ನಿ ಬಿಗ್ ಶಾಕ್ ನೀಡಿದ್ದಾಳೆ.

ಬೆಡ್ ರೂಂ ಗೆ ಬಂದ ಪತ್ನಿ ಪತಿಯನ್ನು ಮಾತನಾಡಿಸಲೇ ಇಲ್ಲ, ಪತಿಯೇ ಮಾತನಾಡಿಸಲು ಮುಂದಾದರೂ ಏನನ್ನೂ ಕೇಳಿಸಿಕೊಳ್ಳುವ ಮನಸ್ಸಿನಲ್ಲಿರಲಿಲ್ಲ, ಆದರೂ ಸಾವರಿಸಿಕೊಂಡು ಮತ್ತೆ ಮಾತನಾಡಿಸಿದಾಗ ತನಗೆ ಈ ಮದುವೆ ಇಷ್ಟವಿರಲಿಲ್ಲ. ತಾನು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಜೀವನ ನಡೆಸಲು ಇಚ್ಚಿಸುವುದಾಗಿ ತಿಳಿಸಿದ್ದಾಳೆ. ಮದುವೆಯಾಗುವವರೆಗೂ ಸುಮ್ಮನಿದ್ದು, ಏಕಾಏಕಿ ಈಗ ಬೇರೆ ಯುವಕನನ್ನು ಪ್ರೀತಿಸಿರುವುದಾಗಿ ಹೇಳುತ್ತಿರುವ ಪತ್ನಿಯ ಮಾತು ಕೇಳಿ ದಂಗಾಗಿದ್ದಾನೆ.

ಇದೇ ವೇಳೆ ಆಕೆಯ ಪ್ರಿಯಕರ ಕೂಡ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇಷ್ಟೆಲ್ಲ ನಡೆದ ಮೇಲೆ ಮದುಮಗ ಮನೆಯವರಿಗೆ ವಿಷಯ ಹೇಳಿದ್ದಾನೆ. ಎರಡು ಮನೆಯವರ ನಡುವೆ ಗಲಾಟೆ ನಡೆದಿದೆ. ವಿಷಯಗೊತ್ತಿದ್ದು ಮಗಳನ್ನು ತಮ್ಮ ಮಗನಿಗೆ ಮದುವೆ ಮಾಡಿ ವಂಚಿಸಲಾಗಿದೆ ಎಂದು ಯುವತಿಯ ಪೋಷಕರ ವಿರುದ್ಧ ವರನಕಡೆಯವರು ಗಲಾಟೆ ಮಾಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Home add -Advt

ಪ್ರಕರಣ ದಾಖಲಿಸಿಕೊಂಡಿರುವ ಜೈಪುರದ ವಿಶ್ವಕರ್ಮ ಠಾಣೆ ಪೊಲೀಸರು ಮದುಮಗಳು, ಆಕೆ ಪ್ರಿಯಕರ ಹಾಗೂ ಪೋಷಕರನ್ನು ವಶಕ್ಕೆ ಪಡೆದಿದ್ದಾರೆ.

ಚಿನ್ನಾಭರಣ ಖರೀದಿಸಲು ಇದು ಉತ್ತಮ ಸಮಯವೇ?

Related Articles

Back to top button