Kannada NewsLatestPolitics

*ರಾಧಿಕಾ ಕುಮಾರಸ್ವಾಮಿ ಬಳಿ 2 ಕೋಟಿ ಸಾಲ ಪಡೆದ ವಿಚಾರ: ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಸಚಿವ ಜಮೀರ್ ಅಹ್ಮದ್ ಗೆ 2 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಎಂಬ ವಿಚಾರವಾಗಿ ಲೋಕಾಯುಕ್ತ ಮುಂದೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸ್ವತಃ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ನಾನು ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ ಅವರಿಂದ 2 ಕೋಟಿ ಸಾಲ ಪಡೆದಿದ್ದು ನಿಜ. ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಅವರು ಸಾಲ ಕೊಟ್ಟಿದ್ದನ್ನು ನಾನು ಆದಾಯ ತೆರಿಗೆಯಲ್ಲಿ ತೋರಿ೮ಸಿದ್ದೇನೆ. ರಾಅಧಿಕಾ ಕುಮಾರಸ್ವಾಮಿ ಅವರು ಅವರ ಆದಾಯ ತೆರಿಗೆ ಫೈಲ್ ಮಾಡುವಾಗ ತೋರಿಸಿದ್ದಾರೆ. ಇಡಿ ದಾಳಿ ಬಳಿಕ ಈಗ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button