Latest

ಜಮ್ಮು-ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಗವರ್ನರ್ ನೇಮಕ

ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಇಂದು ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.

ನೂತನ ಉಪ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಮನೋಜ್ ಸಿನ್ಹಾ, ತಮಗೆ ದೊಡ್ಡ ಹೊಣೆಗಾರಿಕೆ ಹೊರಿಸಲಾಗಿದ್ದು ಇವತ್ತು ಕಾಶ್ಮೀರಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಮನೋಜ್ ಸಿನ್ಹಾ ಅವರು ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ (2014-19) ಕೇಂದ್ರ ಟೆಲಿಕಾಂ ಖಾತೆ ಸಚಿವರಾಗಿದ್ದರು. ಎರಡು ಬಾರಿ ಸಂಸದರಾಗಿದ್ದರು. ಆದರೆ, 2019ರ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ-2 ಅವಧಿಯಲ್ಲಿ ಅವರಿಗೆ ಮತ್ತೆ ಮಂತ್ರಿಯಾಗುವ ಅವಕಾಶ ಕೈತಪ್ಪಿತ್ತು. ಇದೀಗ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.

ನಿನ್ನೆಯಷ್ಟೇ ಗಿರೀಶ್ ಚಂದ್ರ ಮುರ್ಮು, ಅವರು ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಕೂಡ ಇದೀಗ ಅಂಗೀಕಾರವಾಗಿದೆ. ಇನ್ನೊಂದು ವಾರದಲ್ಲಿ ಭಾರತದ ಆಡಿಟರ್ ಜನರಲ್(ಸಿಎಜಿ) ರಾಜೀವ್ ಮೆಹರಿಶಿ ನಿವೃತ್ತಿಯಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಮಂದಿನ ಸಿಎಜಿಯಾಗಿ ಗಿರೀಶ್​​​ ಚಂದ್ರ ಮುರ್ಮು ನೇಮಕವಾಗುವ ಸಾಧ್ಯತೆಯಿದ್ದು, ಇದೇ ಕಾರಣಕ್ಕಾಗಿ ಮುರ್ಮು ರಾಜೀನಾಮೆ ನೀಡಿದ್ಧಾರೆ ನ್ನಲಾಗುತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button