
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಪ್ರವಾಸಿಗರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕುಪ್ವಾರಾ ಜಿಲ್ಲೆಯ ಕಂಡಿಖಾಸ್ ಪ್ರದೇಶದಲ್ಲಿ ರಸೂಲ್ ಮಗ್ರೆ (45) ಮೃತ ಸಾಮಾಜಿಕ ಕಾರ್ಯಕರ್ತ. ತಡರಾತ್ರಿ ರಸೂಲ್ ಮಗ್ರೆ ನಿವಾಸದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರಸೂಲ್ ಗೆ ಹೊಟ್ಟೆ ಹಾಗೂ ಎಡ ಮಣಿಕಟ್ಟಿಗೆ ಗುಂಡೇಟು ತಗುಲಿತ್ತು.. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹಂದ್ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಉಗ್ರರು ರಸೂಲ್ ಮಗ್ರೆಯನ್ನು ಗುಂಡಿಟ್ಟು ಹತ್ಯೆ ಮಾಡಲು ಕಾರಣ ತಿಳಿದುಬಂದಿಲ್ಲ.