ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಸರ್ಕಾರವು ಭೂ ಸಾರಿಗೆಯಲ್ಲಿ ಮಹತ್ತರ ಅಭಿವೃದ್ಧಿ ತರಲು ಹಲವು ಕಾರ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೂ ಬಹು ಪಾಲು ಜನರ ಮೆಚ್ಚಿನ ರೈಲು ಸಂಚಾರದಲ್ಲಿ, ಆಧುನಿಕತೆಯ ಸ್ಪರ್ಶದಿಂದ, ಸಾರ್ವಜನಿಕರಿಗೆ ಅನುಕೂಲವಾಗುವಂತೆ “ವಂದೇ ಭಾರತ್” ವಿಶೇಷ ತಂತ್ರಜ್ಞಾನವನ್ನೊಳಗೊಂಡ ರೈಲುಗಳ ಓಡಾಟ ಶುರುವಾಗಿವೆ.
ಇದೀಗ ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಟವ್ ಹೇಳಿದ್ದಾರೆ. ‘ ಪ್ರಸ್ತುತ ಆರ್ಥಿಕ ವರ್ಷದಲ್ಲಿಯೇ ಜಮ್ಮು-ಶ್ರೀನಗರ ರೈಲು ಮಾರ್ಗ ಆರಂಭಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಹೊಸ ರೈಲುಗಳನ್ನು ವಿಶೇಷ ಶೈಲಿಯಲ್ಲಿ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಮಾರ್ಚ್ 2024 ವೇಳೆಗೆ ನಾವು ದೇಶಾದ್ಯಂತ ಒಟ್ಟು 75 ರೈಲುಗಳು ಸಂಚರಿಸುವಂತೆ ಮಾಡುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ