ಜ.20-24: ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಅಭಯ ಪಾಟೀಲ ಬೆಳಗಾವಿಯಲ್ಲಿ ಪ್ರತಿವರ್ಷ ಆಯೋಜಿಸುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಈ ಬಾರಿ ಜನೆವರಿ 20ರಿಂದ 24ರ ವರೆಗೆ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ನಡೆಲಿದೆ.
ಫುಡ್ ಫೆಸ್ಟಿವಲ್, ಬಲೂನ್ ಫೆಸ್ಟಿವಲ್, ಡಿಜೆ ನೈಟ್, ಕ್ರ್ಯಾಕರ್ಸ್ ಶೋ, ಬಾಡಿ ಬಿಲ್ಡಿಂಗ್ ಕಾಂಪಿಟೇಶನ್, ಡಾನ್ಸ್ ಮತ್ತು ಫ್ಯಾಶನ್ ಶೋ ಮೊದಲಾದವು ನಡೆಯಲಿವೆ.
ಜ.20ರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಸಂಜೆ 4.45ಕ್ಕೆ ಚಿತ್ರಕಲಾ ಸ್ಪರ್ಧೆ ನಡೆಯುವುದು. 5 ಗಂಟೆಗೆ ಚಿಲ್ಡ್ರನ್ ಫೆಸ್ಟಿವಲ್, 7 ಗಂಟೆಗೆ ನೈಟ್ ಕೈಟ್ ಫ್ಲೈಯಿಂಗ್ ಆಯೋಜಿಸಲಾಗಿದೆ.
21ರಂದು 10 ಗಂಟೆಗೆ ಗಾಳಿಪಟ ಹಾರಾಟ, 10.30ಕ್ಕೆ ಉಮಂಗ್ ಯುಥ್ ಫೆಸ್ಟಿವಲ್, 5.30ಕ್ಕೆ ಸಮಾರೋಪ ಕಾರ್ಯಕ್ರಮ, 6.30ಕ್ಕೆ ಸಮೂಹ ನೃತ್ಯಸ್ಪರ್ಧೆ, 7 ಗಂಟೆಗೆ ನೈಟ್ ಕೈಟ್ ಫ್ಲೈಯಿಂಗ್ ನಡೆಯಲಿದೆ.
22ರಂದು 10 ಗಂಟೆಗೆ ಯುಥ್ ಫೆಸ್ಟಿವಲ್, 5 ಗಂಟೆಗೆ ಬಲೂನ್ ಫೆಸ್ಟಿವಲ್, 6.30ಕ್ಕೆ ಡಿಜೆ ನೈಟ್, 9 ಗಂಟೆಗೆ ಕ್ರ್ಯಾಕರ್ಸ್ ಶೋ ಆಯೋಜಿಸಲಾಗಿದೆ.
23ರಂದು ಬೆಳಗ್ಗೆ 10 ಗಂಟೆಗೆ ಯುಥ್ ಫೆಸ್ಟಿವಲ್, ಸಂಜೆ 5 ಗಂಟೆಗೆ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್, 7 ಗಂಟೆಗೆ ಫ್ಯಾಶನ್ ಶೋ, 9 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ