Latest

ಜನಾರ್ಧನ ರೆಡ್ಡಿ ಪತ್ನಿಯ ಫೋಟೋ ಶೂಟ್; ರವಿವರ್ಮನ ಕುಂಚದ ಕಲೆಯ ಸುಂದರಿಯಂತೆ ಫೋಸ್ ನೀಡಿದ ಲಕ್ಷ್ಮಿ ಅರುಣಾ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ರಾಜಾ ರವಿವರ್ಮನ ಕುಂಚದಲ್ಲಿ ಅರಳಿದ ಕಲೆಗಳು ಇಂದಿಗೂ ಎಂದಿಗೂ ಶಾಶ್ವತ…ಅದರಲ್ಲಿಯೂ ನಳ-ದಮಯಂತಿ, ಮತ್ಸ್ಯಗಂಧಿ, ರಾಧಾ, ದೇವಕಿ, ಸುಭದ್ರೆ, ಮೇನಕೆ, ತಾರಾಮತಿ, ಸೀತಾ, ಗಂಗೆ ಹೀಗೆ 14ಕ್ಕೂ ಹೆಚ್ಚು ತೈಲ ಚಿತ್ರಗಳು ರವಿವರ್ಮನ ಕುಂಚದಲ್ಲಿ ಮೂಡಿದ ಪ್ರಸಿದ್ಧ ಚಿತ್ರಗಳು. ಇದೀಗ ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಪತ್ನಿಯನ್ನು ರವಿವರ್ಮನ ಕಲ್ಪನೆಯ ಸುಂದರಿಯ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದು ವಿಶೇಷ.

1848ರ ಶ್ರೇಷ್ಠ ಚಿತ್ರಕಾರ ರಾಜಾ ರವಿವರ್ಮಾ ಅವರ ಜನ್ಮದಿನ (ಏಪ್ರಿಲ್.29) ಅವರ ಸವಿ ನೆನಪಿಗಾಗಿ ಜನಾರ್ಧನ ರೆಡ್ಡಿ ರವಿವರ್ಮಾ ಬಿಡಿಸಿದ ಚಿತ್ರಕಲೆಯಲ್ಲಿ ಮೂಡಿದ ಸುಂದರಿಯರು ಹೋಲುವಂತೆ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಅಲಂಕರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ.

ರವಿವರ್ಮಾ ಕುಂಚದಲ್ಲಿ ಮೂಡಿದ ಕೆಲ ಆಯ್ದ ಚಿತ್ರಗಳ ರೀತಿಯಲ್ಲಿ ಸುಂದರವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕರಗೊಂಡಿರುವ ಜನಾರ್ಧನ ರೆಡ್ದಿ ಪತ್ನಿ ಲಕ್ಷ್ಮಿ ಅರುಣಾ, ಅದೇ ಮಾದರಿಯಲ್ಲಿ ಕ್ಯಾಮರಾಗೆ ಪೋಸ್ ನೀಡಿರುವುದು ಗಮನ ಸೆಳೆಯುತ್ತಿದೆ.
ಡಿಸಿಸಿ ಬ್ಯಾಂಕ್ ಇತಿಹಾಸದಲ್ಲೇ ಮೊದಲ ಬಾರಿಗೆ ನಿವೃತ್ತ ನೌಕರರಿಗೆ ಪಿಂಚಣಿ ಜಾರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button