ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ನೂತನ ಮನೆ ಗೃಹ ಪ್ರವೇಶದ ಮೂಲಕ ರಾಜ್ಯ ರಾಜಕಾರಣಕ್ಕೆ ಮತ್ತೆ ಧುಮುಕಲಿದ್ದಾರೆ ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜನಾರ್ಧನರೆಡ್ಡಿ ಇಂದು ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ರಾಜಕೀಯಕ್ಕಾಗಿಯೇ ಜನಾರ್ಧನ ರೆಡ್ಡಿ ಹೊಸ ಮನೆ ಖರೀದಿ ಮಾಡಿದು, ಇಂದು ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಗೃಹಪ್ರವೇಶ ನೆರವೇರಿಸಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಹೋಮ-ಹವನ, ಪೂಜಾ ವಿಧಿವಿಧಾನಗಳು ನಡೆದಿದ್ದು, ಇಂದು ಬೆಳಿಗ್ಗೆ ಗೃಹಪ್ರವೇಶ ನೆರವೇರಿದೆ. ಜನಾರ್ಧನ ರೆಡ್ಡಿ ದೆಹಲಿ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಅರುಣಾಲಕ್ಷ್ಮಿ ಅವರೇ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಿದ್ದಾರೆ. ಗೃಹ ಪ್ರವೇಶದ ಬಳಿಕ ರಾಜಕೀಯದ ಬಗ್ಗೆ ಮಾತನಾಡುತ್ತೇನೆ ಎಂಬ ಜನಾರ್ಧನ ರೆಡ್ಡಿ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಗೃಹ ಪ್ರವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ, ಬಳ್ಳಾರಿಯಿಂದ ದೂರವಿರುವಂತೆ ಜನಾರ್ಧನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ನಮಗೆ ಬೆಂಗಳೂರಿನಲ್ಲಿ ಮನೆ ಮಾಡಿದರೆ ದೂರವಾಗುತ್ತೆ ಎಂಬ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದೇವೆ ಎಂದರು.
12 ವರ್ಷಗಳ ಕಾಲ ಜನಾರ್ಧನ ರೆಡ್ದಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆದರೂ ಈಗ ಜನರಸೇವೆ ಮಡಬೇಕು ಜನರ ಮಧ್ಯೆ ಇರಬೇಕೆಂದು ಬಯಸಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಅವರೇ ಹೇಳುತ್ತಾರೆ. ಜನರ ಪ್ರೀತಿ ಆಶಿರ್ವಾದ ಸದಾ ಅವರ ಮೇಲೆ ಇರುತ್ತೆ ಎಂಬುದು ನನ್ನ ನಂಬಿಕೆ ಎಂದು ಹೇಳಿದರು.
*ನಟಿ ಅಭಿನಯ ಸೇರಿದಂತೆ ಮೂವರಿಗೆ ಜೈಲುಶಿಕ್ಷೆ; ಹೈಕೋರ್ಟ್ ಮಹತ್ವದ ತೀರ್ಪು*
https://pragati.taskdun.com/actress-abhinaya2-yers-jailhigh-courtdowry-harassment-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ