Latest

ಕಾಂಗ್ರೆಸ್ ನ ಗೃಹಲಕ್ಷ್ಮಿ ಯೊಜನೆಗೆ ಟಕ್ಕರ್ ಕೊಟ್ಟ ಜನಾರ್ಧನ ರೆಡ್ಡಿ

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಕಲ್ಯಾಣ ರಾಜ್ಯ ಒಪ್ರಗತಿ ಪಕ್ಷ ಎಂಬ ನೂತನ ಪಕ್ಷ ಸ್ಥಾಪನೆ ಮೂಲಕ ವಿಧಾನಸಭಾ ಚುನಾವಣೆ ಅಖಾಡಕ್ಕೆ ಮತ್ತೆ ಧುಮುಕಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕಾಂಗ್ರೆಸ್ ಗೆ ಟಕ್ಕರ್ ಕೊಡುವಂತಹ ಯೋಜನೆಯನ್ನು ಘೋಷಿಸಿದ್ದಾರೆ.

ಕೊಪ್ಪಳದಲ್ಲಿ ಕೆಆರ್ ಪಿಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜನಾರ್ಧನ ರೆಡ್ದಿ, ಪ್ರತಿ ಕುಟುಂಬಕ್ಕೆ 2500 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಸ್ತ್ರೀ ಶಕ್ತಿ ಸಂಘಟನೆಗಳಿಗೆ ಬಡ್ಡಿ ರಹಿತ 10 ಲಕ್ಷ ರೂಪಾಯಿವರೆಗೆ ಸಾಲ. ಕೆಆರ್ ಪಿಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರಕ್ಕೂ ಹೆಚ್ಚು ವೇತನ ನೀಡುವುದಾಗಿ ಭರವಸೆ ನೀಡಿದರು.

ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಕಾಯುವ ಜಾಯಮಾನದವನಲ್ಲ, ಇಲ್ಲಿ ಸೇರಿದ ಜನರನ್ನು ನೋಡಿದರೆ 20 ಮಾತ್ರೆ ತೆಗೆದುಕೊಳ್ಳುವವರು 40 ಮಾತ್ರೆ ತೆಗೆದುಕೊಳ್ಳಲು ಆರಂಭಿಸುತ್ತಾರೆ ಎಂದು ಪರೀಕ್ಷವಾಗಿ ಶ್ರೀರಾಮುಲು ವಿರುದ್ಧ ಕಿಡಿಕಾರಿದ್ದಾರೆ.

ಹುಲಿ ಯಾವತ್ತೂ ಸಣ್ಣಪುಟ್ಟ ಬೇಟೆಯಾಡಲ್ಲ, ಅದು ಕಾದುನೋಡಿ ದೊಡ್ಡ ಬೇಟೆಯಾಡುತ್ತೆ. ಬೋನಿನಲ್ಲಿದ್ದರೂ, ಜೈಲಿನಲ್ಲಿದ್ದರೂ ಹುಲಿ ಯಾವತ್ತಿದ್ದರೂ ಹುಲಿಯೇ. ಕೆಲ ಹುಚ್ಚು ರಾಜಕಾರಣಿಗಳು ರೆಡ್ಡಿ 12 ವರ್ಷದಿಂದ ಮನೆಯಲ್ಲಿದ್ದಾನೆ, ನನ್ನ ರಾಜಕಾರನ ಮುಗಿದಿದೆ ಅಂತ ಕೆಲವರು ತಿಳಿದುಕೊಂಡಿದ್ದರು. ಜಿಂಕೆಗಳು ಇಂದಿನಿಂದ ಮನೆಸೇರಿಕೊಳ್ಳಬೇಕು, ಇಂದಿನಿಂದ ನಾನು ಬೇಟೆ ಆರಂಭಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button