Latest

*ರೆಡ್ಡಿ ಹೊಸ ಪಕ್ಷ ಘೋಷಣೆ; ಬಿಜೆಪಿಯಲ್ಲಿಯೇ ಭಿನ್ನ ನಿಲುವು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿಯೇ ಭಿನ್ನ ನಿಲುವು ವ್ಯಕ್ತವಾಗುತ್ತಿದೆ. ಜನಾರ್ಧನ ರೆಡ್ಡಿ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದರೆ, ಆರೋಗ್ಯ ಸಚಿವ ಡಾ.ಸುಧಾಕರ್, ರೆಡ್ಡಿಯವರು ತಮ್ಮ ನಿರ್ಧಾರ ಬದಲಿಸಿಕೊಳ್ಲುತ್ತಾರೆಂಬ ವಿಶ್ವಾಸವಿದೆ, ಈ ನಿಟ್ತಿನಲ್ಲಿ ತಾವು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಜನಾರ್ಧನ ರೆಡ್ಡಿ ಬಿಜೆಪಿಯಲ್ಲಿಯೇ ಇರಲಿಲ್ಲ. ಕೇಸ್ ಆದ್ಮೇಲೇ ಪಕ್ಷದಿಂದ ಪಾರ್ಟಿಸಿಪೇಟ್ ಆಗಿಲ್ಲ. ದೊಡ್ಡ ಸ್ಕ್ಯಾಮ್ ಆದ್ಮೇಲೆ ಅವರನ್ನು ಪಾರ್ಟಿಯಿಂದ ತೆಗೆದಿದ್ದಾರೆ. ಅವರು ಹೊಸ ಪಕ್ಷ ಸ್ಥಾಪನೆ ಮಾಡಿದರೆ ನಮಗೇನೂ ಸಮಸ್ಯೆ ಇಲ್ಲ, ಅದು ಅವರ ಸ್ವಂತ ಇಚ್ಛೆ ಎಂದು ಗುಡುಗಿದ್ದಾರೆ.

ಬಿಜೆಪಿಯವರು ಕೈಕೊಟ್ರು ಎನ್ನಲು ಯಾರು ಕೈಕೊಟ್ರು ಅವರಿಗೆ? ಅಮಿತ್ ಶಾ ಕೈಕೊಟ್ರಾ, ಮೋದಿಯವರು ಕೈಕೊಟ್ರಾ? ಯಡಿಯೂರಪ್ಪ ಕೈಕೊಟ್ರಾ? ಈ ಹಿಂದೆ ಅವರು ಬಿಜೆಪಿಯಲ್ಲಿಯೇ ಮಂತ್ರಿಯಾಗಿದ್ದರಲ್ಲ… ಆ ಸಂದರ್ಭದಲ್ಲಿ ಅವರಿಗೆ ಸಹಾಯಮಾಡಿದ್ದಾರೆ ಹೊರತು ಕೈಕೊಟ್ಟಿಲ್ಲ. ಕಾಂಗ್ರೆಸ್, ಜೆಡಿಎಸ್ ಅವರ ಮೈಮೇಲೆ ಬಿದ್ದಿದ್ರು. ಆಗ ಬಿಜೆಪಿ ನಾಯಕರೆಲ್ಲರೂ ಸಪೋರ್ಟ್ ಮಾಡಿದ್ದರು ಎಂದು ಹೇಳಿದರು.

ಇನ್ನೊಂದೆಡೆ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಇದೊಂದು ಅನಿರೀಕ್ಷಿತ ಬೆಳವಣಿಗೆ ಇತ್ತೀಚೆಗೆ ನಾನು ಬಳ್ಳಾರಿಗೆ ಹೋದಾಗ ರೆಡ್ದಿಯವರನ್ನು ಭೇಟಿಯಾಗಿದ್ದೆ. ಆಗ ಕೆಲ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ರೆಡ್ಡಿಯವರು ತಮ್ಮ ನಿಲುವು ಬದಲಿಸಬೇಕು. ಹೊಸ ಪಕ್ಷ ಘೋಷಣೆ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.

ಜನಾರ್ಧನ ರೆಡ್ಡಿ ಅವರಿಗೆ ಬಿಜೆಪಿ ಬಗೆ ಯಾವುದೇ ಅನಸ್ತಾಪವಿಲ್ಲ, ಆದರೆ ಕೆಲ ವಿಚಾರದಲ್ಲಿ ಅವರು ಭಾವನಾತ್ಮಕವಾಗಿದ್ದರು, ಹಾಗಾಗಿ ಅವರಿಗೆ ಬೇಸರವಿತ್ತು. ನಾನು ಅವರನ್ನು ಭೇಟಿಯಾದಾಗ ಕೆಲ ವಿಚಾರ ಮಾತನಾಡಿದ್ದರು. ಅವರ ಭಾವನೆಗಳನ್ನು ನಾನು ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೂ ತಿಳಿಸಿದ್ದೆ. ಅವರು ಬೇರೆ ಪಕ್ಷ ಸ್ಥಾಪನೆ ಮಾಡಿದ್ದು ಅನಿರೀಕ್ಷಿತ. ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಗೊಳಿಸುವುದು ಬಹಳ ಕಷ್ಟದ ವಿಚಾರ. ಅವರು ತಮ್ಮ ನಿಲುವು ಬದಲಿಸಲಿ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಉತ್ತಮ ಆಡಳಿತ ನೀಡಿತ್ತಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ರೆಡ್ದಿಯವರ ಶ್ರಮ ಬಹಳವಿದೆ. ಹೀಗಿರುವಾಗ ಎಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ರೆಡ್ದಿಯವರು ಈರೀತಿ ಯಾಕೆ ಆಲೋಚಿಸಿದರು ಗೊತ್ತಿಲ್ಲ. ಈ ಬಗ್ಗೆ ಪಕ್ಷದ ಹಿರಿಯರ ಜೊತೆ ನಾನು ಮತ್ತೊಮ್ಮೆ ಮಾತನಾಡಿ ರೆಡ್ದಿಯವರ ನಿರ್ಧಾರ ಬದಲಿಸುವ ಪ್ರಯತ್ನ ಮಾಡುತ್ತೇನೆ.ಅವರು ಹೊಸ ಪಕ್ಷ ಘೋಷಣೆ ನಿಲುವು ವಾಪಸ್ ಪಡೆಯುತ್ತಾರೆ ಬಿಜೆಪಿಯಲ್ಲಿಯೇ ಇರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

*ಸಿದ್ಧಾಂತವೇ ಬೇರೆಯಾದಾಗ ಮನವೊಲಿಸುವುದು ಹೇಗೆ? ಎಂದ ಶ್ರೀರಾಮುಲು*

https://pragati.taskdun.com/shreeramulureactionjanardhana-reddynew-party/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button