ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಮಾಜಿ ಸಚಿವ ಜನಾರ್ಧನ ರೆಡ್ಡಿ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದು, ಬಳ್ಳಾರಿ ರಾಜಕೀಯಕ್ಕೂ ಹೊಸ ತಿರುವು ನೀಡಿದ್ದಾರೆ. ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ, ಬಿಜೆಪಿಯಲ್ಲಿಯೇ ಮುಂದುವರೆಯುತ್ತೇನೆ ಎಂದು ಹೇಳುತ್ತಲೇ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನ ರೆಡ್ಡಿ, ಬಿಜೆಪಿ ಬಿಡುವುದಿಲ್ಲ ಎಂದು ಹೇಳುತ್ತ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಘೋಷಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ರಾಜಕೀಯಕ್ಕೆ ಹೊಸ ಪಕ್ಷದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಮಾಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಘಟನೆ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ಯಾವ ಅಡೆ ತಡೆ ಬಂದರೂ ಮುನ್ನಡೆಯುತ್ತೇನೆ. ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಎಂದು ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ರೆಡ್ಡಿ, ಬಿಜೆಪಿಯೊಂದಿಗಿನ ತಮ್ಮ ಒಡನಾಟ, ಶ್ರೀರಾಮುಲು ಜೊತೆಗಿನ ಆತ್ಮೀಯತೆ ಹಳೆ ದಿನಗಳ ಬಗ್ಗೆ ನೆನಪಿಸಿಕೊಳ್ಳುತ್ತಾ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನವಾದಾಗ ತಾವು ಅನುಭವಿಸಿದ್ದ ಕಷ್ಟದ ದಿನಗಳ ಬಗ್ಗೆಯೂ ಎಳೆಎಳೆಯಾಗಿ ಬಿಚ್ಚಿಟ್ಟರು.
ಶ್ರೀರಾಮುಲು ಮೊದಲ ಬಾರಿ ಪರಿಚಯವಾದಾಗ ಅವರಿಗೆ 17 ವರ್ಷ, ನನಗೆ 21 ವರ್ಷ. ರಾಮುಲು ಅವರ ಸೋದರ ಮಾವ ಸಾರ್ವಜನಿಕ ಜೀವನದಲ್ಲಿದ್ದವರು. ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ರಾಜೀವ್ ಗಾಂಧಿಯವರು ರಾಮುಲು ಸೋದರ ಮಾವನನ್ನು ಗುರುತಿಸಿದ್ದರು. ರಾಜೀವ್ ಗಾಂಧಿ ಬಳ್ಳಾರಿಗೆ ಬಂದಾಗ ರಾಮುಲುಗೆ ಹಾರಹಾಕಿ ಸನ್ಮಾನಿಸಿದ್ದು ದೊಡ್ಡಮಟ್ಟದಲ್ಲಿಸುದ್ದಿಯಾಗಿತ್ತು. ಶ್ರೀರಾಮುಲು ಮೇಲೆಯೂ ಶತ್ರುಗಳ ಕಣ್ಣಿತ್ತು. ನಂತರ ಶ್ರೀರಾಮುಲು ನನ್ನ ಆಶ್ರಯಕ್ಕೆ ಬಂದರು. ನಗರ ಸಭೆ ಸದಸ್ಯರಾಗಿ,ಶಾಸಕರಾಗಿ ಆಯ್ಕೆಯಾದರು. ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಘೋಷಿಸುತ್ತಿದ್ದಂತೆ ರಾಮುಲು ಅವರಿಗೆ ಆತಂಕ ಎದುರಾಗಿತ್ತು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದರು. ಸುಷ್ಮಾ ಸ್ವರಾಜ್ ಆಶೀರ್ವಾದದಿಂದ ನಾವು ಬಿಜೆಪಿ ಸೇರಿದ್ದೆವು. ನಮ್ಮ ಹಾಗೂ ಸುಷ್ಮಾ ಸ್ವರಾಜ್ ಅವರದ್ದು ತಾಯಿ-ಮಕ್ಕಳ ಸಂಬಂಧ. 2008ರಲ್ಲಿ ಯಡಿಯೂರಪ್ಪ ಸಿಎಂ ಆದರು. ಮಧ್ಯರಾತ್ರಿ ನಮ್ಮನ್ನು ಬೆಂಗಳೂರಿಗೆ ಕರೆಸಿ ಒಂದೇ ಕುಟುಂಬದ ಮುವರಿಗೆ ಮಂತ್ರಿ ಸ್ಥಾನ ನೀಡಿದರು. ನಾನು ಬೇಡ ಎಂದು ಹೇಳಿದ್ದೆ ಆದರೂ ನನ್ನನ್ನು ಸಚಿವನನ್ನಾಗಿ ಮಾಡಿದ್ದರು. ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಜೆಡಿಯುಗೆ ಬನ್ನಿ ನಿಮಗೆ ಒಳ್ಳೆ ಭವಿಷ್ಯವಿದೆ ಎಂದು ಹೇಳಿದ್ದರು. ನಾನು ಬಿಜೆಪಿಯನ್ನು ಎಂದಿಗೂ ತೊರೆಯುವುದಿಲ್ಲ ಎಂದು ಹೇಳಿದ್ದೆ. ಇಡೀ ಬಳ್ಳಾರಿ ಜಿಲ್ಲೆಯನ್ನು ಬಿಜೆಪಿ ಮಯ ಮಾಡಿದ್ದು ಈ ಜನಾರ್ಧನ ರೆಡ್ದಿ. ಈಗಲೂ ಬಳ್ಳಾರಿ ಜನತೆಯ ಸೇವೆಗೆ ಸಿದ್ಧ ಎಂದು ತಿಳಿಸಿದರು.
ನನ್ನನ್ನು ತಡೆಯಲು ಅಕ್ರಮ ಗಣಿಗಾರಿಕೆ ಆರೋಪ ಮಾಡಿ ಬಂಧಿಸಿದರು. ಉದ್ದೇಶ ಪೂರ್ವಕವಾಗಿ ಅಕ್ರಮ ಗಣಿಗಾರಿಕೆ ಎಂದು ನನ್ನ ಹೆಸರು ಸಿಲುಕಿಸಿದರು. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ಲಾನ್ ಮಾಡಿದ್ದರು. ಶತ್ರುಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಕಷ್ತಕಾಲದಲ್ಲಿ ನನಗೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ನೆರವಿಗೆ ಬಂದು ನನ್ನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಚಿವನಾಗಿದ್ದಾಗ ಹೆಲಿ ಟೂರಿಸಂ ಕನಸು ಕಂಡಿದ್ದೆ. ರಾಜ್ಯದಲ್ಲಿ ನಾಲ್ಕು ಕಡೆದಳಲ್ಲಿ ಹೆಲಿ ಟೂರಿಸಂ ಮಾಡಬೇಕು ಎಂದು ಯೀಜನೆ ರೂಪಿಸಿದ್ದೆ. ಬಸವಣ್ಣನವರ ಬೃಹತ್ ಪುತ್ಥಳಿ ನಿರ್ಮಾಣದ ಕನಸಿತ್ತು. ಕರ್ನಾಟಕವನ್ನು ಇಡೀ ಜಗತ್ತಿಗೆ ತೋರಿಸಬೇಕು ಎಂದುಕೊಂಡಿದ್ದೆ. ನಾನು ಯಾವುದೇ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರಲಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ತೊಂದರೆ ನಿದಿದರು. ಹಲವು ಬಾರಿ ಐಟಿ ದಾಳಿ ನಡೆಸಿದರು. ಬಿಜೆಪಿಯನ್ನು ಬಿಡುವ ಮಾತಿಲ್ಲ. ಪಕ್ಷದಲ್ಲಿಯೇ ಮುಂದುವರೆಯುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ಖಚಿತ. ಗಂಗಾವತಿ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.
*ಹೃದಯಾಘಾತ: ಹಿರಿಯ ನಟ ಚಲಪತಿ ರಾವ್ ಇನ್ನಿಲ್ಲ*
https://pragati.taskdun.com/tollywoodactorchalapati-raodeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ