Kannada NewsLatest

ಮುಗಿಯಿತು ಜನಸ್ಪಂದನ; ನಾಳೆಯಿಂದ ಸ್ಥಳ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ದಕ್ಷಿಣ ಮತಕ್ಷೇತ್ರದ 26 ವಾರ್ಡ್ ಗಳಲ್ಲಿ ಸತತ ಮೂರು ದಿನಗಳಿಂದ ಜನರೊಂದಿಗೆ,  ಬೆರೆತು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ “ಜನಸ್ಪಂದನ ಕಾರ್ಯಕ್ರಮ “ಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. 

Home add -Advt

   ಜನರ ದೈನಂದಿನ ಸಮಸ್ಯೆಗಳಾದ ನೀರು,  ಒಳಚರಂಡಿ,  ರಸ್ತೆ ನಿರ್ಮಾಣ,  ಕಸ ವಿಲೇವಾರಿ,  ಬೀದಿ ದೀಪಗಳು ಇವುಗಳು ಬಹು ಮುಖ್ಯ ಸಮಸ್ಯೆಗಳಾಗಿ ಕಂಡು ಬಂದವು….

         ಒಟ್ಟಾರೆ,   942  ಸಮಸ್ಯೆ ಗಳ ಅರ್ಜಿ ಗಳಲ್ಲಿ   97 ವಿಷಯಗಳ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ  ಅಭಯ ಪಾಟೀಲ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಇನ್ನುಳಿದ ಸಮಸ್ಯೆ  ಕುರಿತಂತೆ  ಶಾಸಕರು,  ಅಧಿಕಾರಿಗಳ ತಂಡ ಕಟ್ಟಿಕೊಂಡು ನಾಳೆ  ಬೆಳಿಗ್ಗೆ  7  ಗಂಟೆಯಿಂದ   ಸ್ಥಳ ಪರಿಶೀಲನೆ ಮಾಡಲಿದ್ದಾರೆ.

 ಈ ಹೊಸ ಪ್ರಯೋಗದ ಕುರಿತು  ಇಡೀ ಕ್ಷೇತ್ರದ ಜನತೆ ಸಂತಸ ವ್ಯಕ್ತ ಪಡಿಸಿದರು.  ಜನರ ಈ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಾಗ ಮಾತ್ರ,  ಈ ಜನಸ್ಪಂದನ ಕಾರ್ಯಕ್ರಮ ಒಂದು ಅರ್ಥ ಪೂರ್ಣ ಕಾರ್ಯಕ್ರಮ , ಹಾಗಾಗಿ ಅಂದುಕೊಂಡಂತೆ ,  ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಜನರ ಸಹಭಾಗಿತ್ವದೊಂದಿಗೆ ಅವರ ಆಶೋತ್ತರಗಳನ್ನು ಈಡೇರಿಸುವತ್ತ  ಪ್ರಯತ್ನಿಸಬೇಕು ಎದು ಅಭಯ ಪಾಟೀಲ ಹೇಳಿದರು.

     ಹೆಚ್ಚಿನ ಸುದ್ದಿಗಳಗಾಗಿ pragativahin.com ನೋಡಿ

Related Articles

Back to top button