ಪ್ರಗತಿವಾಹಿನಿ ಸುದ್ದಿ; ರಾಂಚಿ: ಜಾರ್ಖಂಡ್ ನ ಲತೇಹರ್ ಜಿಲ್ಲೆಯಲ್ಲಿ ಕರ್ಮಪೂಜೆ ಹಬ್ಬ ಆಚರಣೆ ವೇಳೆ 7 ಯುವತಿಯರು ಕೆರೆಗೆ ಬಿದ್ದು ನೀರುಪಾಲಾಗಿರುವ ಘಟನೆ ನಡೆದಿದೆ.
ಮೃತ ಯುವತಿಯರು 12-20 ವರ್ಷ ವಯಸ್ಸಿನವರು. ಕರ್ಮಪೂಜೆ ಬಳಿಕ ಪೂಜಾ ಸಾಮಗ್ರಿ ವಿಸರ್ಜನೆಗೆ ಕೆರೆಗೆ ಇಳಿದಿದ್ದಾಗ ಈ ದುರಂತ ಸಂಭವಿಸಿದೆ.
10 ಬಾಲಕಿಯರು ಕರ್ಮದಾಲಿ ವಿಸರ್ಜನೆಗೆ ಕೆರೆಗೆ ತೆರಳಿದ್ದರು. ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ ಆಕೆಯನ್ನು ರಕ್ಷಿಸಲು ಹೋಗಿ ಉಳಿದ ಯುವತಿಯರೂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಬಲುಮಠ್ ಪೊಲಿಸ್ ಠಾಣೆ ವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಘಟನೆ ನಡೆದಿದೆ.
ರೇವ್ ಪಾರ್ಟಿ; ವಿದ್ಯಾರ್ಥಿಗಳು ಸೇರಿ 14 ಜನರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ