LatestUncategorized

ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ; ಕರ್ನಾಟಕಕ್ಕೆ ಸೇರಿಸಿ; ಜತ್ ತಾಲೂಕು ಕನ್ನಡ ಸಮಿತಿ ಮನವಿ

 ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ಭಾಗದಲ್ಲಿ ಮಹಾರಾಷ್ಟ್ರ ಸರಕಾರ ಕಳೆದ 50 ವರ್ಷಗಳಿಂದ ನಮ್ಮ ಮತಗಳನ್ನು ಪಡೆದುಕೊಂಡು ನಮ್ಮ ಮೇಲೆ ಅನ್ಯಾಯ ಮಾಡುತ್ತಿದೆ ಎಂದು ಜತ್ ತಾಲೂಕಿನ ಕನ್ನಡ ಸಮಿತಿಯ ಅಧ್ಯಕ್ಷ ಸೋಮಲಿಂಗ ಚೌದರಿ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಹಾರಾಷ್ಟ್ರ ರಾಜಕೀಯ ನಾಯಕರು ಚುನಾವಣೆ ಬಂದಾಗ ನಮ್ಮ ಮತಗಳನ್ನು ಪಡೆದುಕೊಂಡು 50 ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರಕಾರ ನಮ್ಮ ಮೇಲೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಜತ್ ತಾಲೂಕಿನ ಅಭಿವೃದ್ಧಿ ಮಾಡುವುದಾಗಿ ಹೇಳಿಕೆ ನೀಡಿದ ಮೇಲೆ ಮಹಾರಾಷ್ಟ್ರ ಸರಕಾರ ಈಗ ನಮ್ಮ ಪರವಾಗಿ ವಿಚಾರ ಮಾಡುತ್ತಿದೆ. ಆದರೆ ನಮಗೆ ಶಾಶ್ವತ ಪರಿಹಾರ ಅಗತ್ಯ. ಆದ್ದರಿಂದ ನಾವೇಲ್ಲರೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ ನಮಗೆ ಕರ್ನಾಟಕಕ್ಕೆ ಸೇರಿಸಿ ಎಂದರು.

ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮೀತಿಯವರು ಬೆಳಗಾವಿಯಲ್ಲಿ ನಿಂತು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಹೇಳುತ್ತಿದ್ದಾರೆ. ಆದರೆ ಜತ್ ತಾಲೂಕಿನ ಜನರಿಗೆ ಮಹಾರಾಷ್ಟ್ರ ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ನೋಡಿ ಕರ್ನಾಟಕಕ್ಕೆ‌ ಬರುತ್ತಿದ್ದಾರೆ ಎಂದರು.

ಕರ್ನಾಟಕದ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಫೆ. ತಿಂಗಳಲ್ಲಿ ಜತ್ ತಾಲೂಕಿನಲ್ಲಿ ಬೃಹತ್ ಕನ್ನಡದ ಸಮಾವೇಶ ನಡೆಸಿ ಇಮ್ಮಡಿ ಪುಲಿಕೇಶಿಯ ದಕ್ಷಿಣಪಥೇಶ್ವರ ಪ್ರಶಸ್ತಿ ನೀಡಲಾಗುವುದು ಎಂದರು.

ಗಡಿ ವಿವಾದ ನ್ಯಾಯಾಲಯದಲ್ಲಿ ಇರುವಾಗ‌ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಆಗಮಿಸಿ ಸಭೆ ನಡೆಸುವುದು ಸರಿಯಲ್ಲ. ಗಡಿ ವಿವಾದ ನ್ಯಾಯಾಲಯದಲ್ಲಿರುವಾಗ ಮಹಾರಾಷ್ಟ್ರ ಪದೇ ಪದೇ ಕ್ಯಾತೆ ತೆಗೆಯುತ್ತಿರುವಯದು ಸರಿಯಲ್ಲ. ಇದು ಕನ್ನಡಿಗರ ಸಹನೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಸಚಿವರು ಇಂಥ ಸಂದರ್ಭದಲ್ಲಿ ಬೆಳಗಾವಿಗೆ ಬಂದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಲೆಕ್ಕ ಹಾಕಲಿ: ಸಿಎಂ ತಿರುಗೇಟು

https://pragati.taskdun.com/cm-basavaraj-bommaireactioncongresss-tweet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button