ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿರುವ ಬೆನ್ನಲ್ಲೇ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಜನರು ನೀರಿಗಾಗಿ ಪರದಾಡುತ್ತಿದ್ದು, ನಮಗೆ ನೀರು ಕೊಡಿ ಇಲ್ಲವಾದಲ್ಲಿ ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಮಹಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಜತ್ ತಾಲೂಕಿನ 42 ಹಳ್ಳಿಗಳ ಜನರು ನಿನ್ನೆ ತಡ ರಾತ್ರಿವರೆಗೂ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದು, ಮಹಾರಾಷ್ಟ್ರ ಸರ್ಕಾರ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಕರ್ನಾಟಕಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ 8 ದಿನಗಳ ಗಡುವು ನೀಡಿರುವ ಜತ್ ತಾಲೂಕಿನ 42 ಹಳ್ಳಿಗಳ ಜನರು, 8 ದಿನಗಳಲ್ಲಿ ನೀರು ಪೂರೈಕೆಯಾಗಿ ಸಮಸ್ಯೆ ಬಗೆಹರಿಸದಿದ್ದರೆ ನಾವು ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಸಭೆಯಲ್ಲಿ ಘೋಷಿಸಿದ್ದಾರೆ.
ಗಡಿ -ನದಿ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರ ನೇಮಕ: ರಾಜ್ಯ ಸರಕಾರ ಆದೇಶ
https://pragati.taskdun.com/appointment-of-chairman-for-border-river-protection-commission-order-by-state-government/
ಹಿಂಡಲಗಾ ಜೈಲು ಪಾಲಾದ ಕಿತ್ತೂರು ತಹಶೀಲ್ದಾರ್, ಗುಮಾಸ್ತ
https://pragati.taskdun.com/kittur-tahashildargumastalokayuktajail/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ