Latest

ಅಭಿಷೇಕ್- ಜಯಾ ಬಚ್ಚನ್ ತಾಳ್ಮೆ ಕೆಡಿಸಿದ ಸೆಲ್ಫಿ ಚಟಗಾರರು

ಪ್ರಗತಿವಾಹಿನಿ ಸುದ್ದಿ, ಭೋಪಾಲ್: ದುರ್ಗಾ ಪೂಜನ ನಿಮಿತ್ತ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿಬಿದ್ದಿದ್ದಕ್ಕೆ ನಟಿ ಜಯಾ ಬಚ್ಚನ್ ಗರಂ ಆಗಿದ್ದಾರೆ.

ಸೆಲ್ಫಿ ಚಟಗಾರರಿಗೆ ಅವರು ಸಿಕ್ಕಾಪಟ್ಟೆ ಕೂಗಾಡುವ ದೃಶ್ಯವಿರುವ ವಿಡಿಯೊವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಷೇಕ್ ಬಚ್ಚನ್ ಕೂಡ ಕೆಲ ಅಭಿಮಾನಿಗಳಿಗೆ ಕಿರಿಕ್ ಮಾಡಿದ್ದಾರೆ.

ಜಯಾ ಮತ್ತು ಅಭಿಷೇಕ್ ಕಾಳಿ ಬಾರಿ ದೇವಸ್ಥಾನದಲ್ಲಿ ದುರ್ಗಾ ಪೂಜೆ ಆಚರಣೆಯಲ್ಲಿ ಭಾಗವಹಿಸಲು ಬುಧವಾರ ಭೋಪಾಲ್‌ಗೆ ತೆರಳಿದ್ದರು. ತಾಯಿ-ಮಗ ಇಬ್ಬರೂ ಆವರಣವನ್ನು ತಲುಪಿದಾಗ, ಉತ್ಸಾಹಿ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸೆಲ್ ಫೋನ್‌ಗಳೊಂದಿಗೆ ಅವರನ್ನು ಸುತ್ತಿಕೊಂಡರು.

ಜನರ ಈ ಕಿರಿಕಿರಿ ತಾಯಿ- ಮಗನ ತಾಳ್ಮೆ ಕೆಡಿಸಿತು. ” ನಿಮಗೆ ನಾಚಿಕೆ ಇಲ್ವಾ..?” ಎಂದು ಜಯಾ ಬಚ್ಚನ್ ಏರು ದನಿಯಲ್ಲಿ ಸೆಲ್ಫಿ ಚಟಗಾರರನ್ನು ಗದರಿಸುತ್ತಿರುವುದು ವಿಡಿಯೊದಲ್ಲಿ ಚಿತ್ರೀಕರಣಗೊಂಡಿದೆ.

Home add -Advt

ಭೀಕರ ರಸ್ತೆ ಅಪಘಾತ; ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ದುರ್ಮರಣ

Related Articles

Back to top button