Kannada NewsKarnataka NewsLatest

*ದೇವಸ್ಥಾನಕ್ಕೆ ಬಂದಿದ್ದ ಜೆಡಿಎಸ್ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಬ್ಯುಸಿನೆಸ್ ಪಾರ್ಟನರ್ ನಿಂದಲೇ ಕೊಲೆಗೆ ಸುಪಾರಿ…!*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ದೇವಸ್ಥಾನದ ಬಳಿಯೇ ಜೆಡಿಎಸ್ ಮುಖಂಡ ಅಪ್ಪುಗೌಡ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಅಪ್ಪುಗೌಡ ಪಾರಾಗಿರುವ ಘಟನೆ ನಡೆದಿದೆ.

ಪ್ರತಿ ಶನಿವಾರದಂತೆಯೇ ಮಂಡ್ಯ ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಜೆಡಿಎಸ್ ಮುಖಂಡ ಅಪ್ಪುಗೌಡ ದೇವರ ದರ್ಶನ ಪಡೆದು ಇನೇನು ದೇವಾಲಯದಿಂದ ಹೊರಬರುತ್ತಿದ್ದರು ಈ ವೇಳೆ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಓರ್ವ ವ್ಯಕ್ತಿ ಡ್ರ್ಯಾಗರ್ ನಿಂದ ಇರಿದಿದ್ದಾನೆ. ಹಲ್ಲೆಗೊಳಗಾರಿವ ಅಪ್ಪುಗೌಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವಸ್ಥಾನಕ್ಕೆ ಬಂದಿದ್ದ ಇತರ ಭಕ್ತರು ದುಷರ್ಮಿಗಳ ದಾಳಿ ಕಂಡು ಕೂಗಿಕೊಂಡಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ತಕ್ಷಣ ಸ್ಥಳದಿಂದ ದುಷ್ಕರ್ಮಿಗಳು ಪಾರಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜೆಡಿಎಸ್ ಮುಖಂಡನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಪ್ರಕರನ ಬೇಧಿಸಿರುವ ಪೊಲೀಸರು 7 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಅಪ್ಪುಗೌಡ ಅವರ ಆಪ್ತ ಸ್ನೇಹಿತ, ಬ್ಯುಸಿನೆಸ್ ಪಾರ್ಟರ್ ಆಗಿದ್ದ ವ್ಯಕ್ತಿಯೇ ಕೊಲೆಗೆ ಸುಪಾರಿ ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಹುಡುಗರನ್ನು ಕರೆಸಿ ಲಕ್ಷ ಲಕ್ಷ ಸುಪಾರಿ ಕೊಟ್ಟಿದ್ದು, ಮೂರು ದಿನಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಲಾಗಿತ್ತು. ನಿನ್ನೆ ಕೂಡ ದೇವಸ್ಥಾನವೊಂದರ ಬಳಿ ಅಪ್ಪುಗೌಡ ಹತ್ಯೆಗೆ ಯತ್ನಿಸಲಾಗಿತ್ತು. ಆದರೆ ಜನ ಓಡಾಡುತ್ತಿದ್ದುದರಿಂದ ಸಾಧ್ಯವಾಗಿಲ್ಲ. ಇಂದು ಮುಂಜಾನೆ ದೇವಸ್ಥಾನಕ್ಕೆ ಅಪ್ಪುಗೌಡ ಒಬ್ಬರೇ ಬರುವುದನ್ನು ಗಮನಿಸಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button