ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ ಎಂದ ಜೆಡಿಎಸ್ ಶಾಸಕ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಯಾವುದೇ ಕಾರಣಕ್ಕೂ ನಾವು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ. ಈ ಮೂಲಕ ಇನ್ನಷ್ಟು ಜೆಡಿಎಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿದೆ.

ಒಂದೆಡೆ ಆಪರೇಷನ್ ಕಮಲದಿಂದಾಗಿ ಕುಗ್ಗಿರುವ ಜೆಡಿಎಸ್ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪಕ್ಷದ ವರಿಷ್ಠರು ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಕೆಲ ಜೆಡಿಎಸ್ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಪಕ್ಷ ತೊರೆಯುವ ಸೂಚನೆ ನೀಡುತ್ತಿದ್ದಾರೆ.

ಈ ಕುರಿತು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ, ಯಾವುದೇ ಕಾರಣಕ್ಕೂ ನಾವು ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ. ಯಡಿಯೂರಪ್ಪ ಇನ್ನೂ ಮೂರು ವರ್ಷ ನಿಸ್ಸಂದೇಹವಾಗಿ ಸರ್ಕಾರ ನಡೆಸಬಹುದು. ಹೀಗಾಗಿ ಧೈರ್ಯವಾಗಿ ಅವರು ಸಂಪುಟ ವಿಸ್ತರಣೆ ಮಾಡಲಿ.

ನಾವು ಅವರಿಗೆ ಧೈರ್ಯ ತುಂಬುತ್ತೇವೆ. ಅವರ ಬೆನ್ನಿಗೆ ನಿಲ್ಲುತ್ತೇವೆ. ಪಸ್ತುತ ನಾಡಿನ ಜನತೆಗಾಗಲಿ ಅಥವಾ ಯಾವುದೇ ಸಚಿವರಿಗಾಗಲಿ ಮಧ್ಯಂತರ ಚುನಾವಣೆ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button