Latest

ಪೊಲೀಸರ ಸೋಗಿನಲ್ಲಿ ಚಿನ್ನದ ಅಂಗಡಿ ಮೇಲೆ ಖತರ್ನಾಕ್ ಗ್ಯಾಂಗ್ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ಖತರ್ನಾಕ್ ಕಳ್ಳರ ಗುಂಪು ಚಿನ್ನದ ಅಂಗಡಿ ಮೇಲೆ ದಾಳಿ ನಡೆಸಿ 800 ಗ್ರಾಮ್ ಚಿನ್ನ, ದಾಖಲಾತಿಗಳನ್ನು ಕದ್ದೊಯ್ದ ಘಟನೆ ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೀತಾ ಜ್ಯುವೆಲರ್ಸ್ ಗೆ ಪೊಲೀಸರೆಂದು ನುಗ್ಗಿದ ಆರು ಕಳ್ಳರು, ನಕಲಿ ಚಿನ್ನ ಮಾರಾಟ ಆರೋಪ ಹಿನ್ನೆಲೆಯಲ್ಲಿ ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ಚಿನ್ನಾಭರಣ, ದಾಖಲೆ ಕದ್ದು ಪರಾರಿಯಾಗಿದ್ದಾರೆ. ಅಲ್ಲದೇ ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕ ಕಾರ್ತಿಕ್ ಗೆ ಕರೆ ಮಾಡಿ ನಿಮ್ಮ ಅಂಗಡಿ ರೇಡ್ ಆಗಿದೆ. ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾರೆ.

ಬೆಂಗಳೂರಿಗೆ ಬಂದ ಅಂಗಡಿ ಮಾಲೀಕ ಹಲಸೂರು ಠಾಣೆಯಲ್ಲಿ ವಿಚಾರಿಸಿದಾಗ ಕಳ್ಳರ ಐಡಿಯಾ ಬಯಲಾಗಿದೆ. ಕಳ್ಳರು ಬಳಸಿದ್ದ ಜೀಪ್ ಸಂಖ್ಯೆ ಆಧಾರದ ಮೇಲೆ ಇದೀಗ ಪೊಲೀಸರು ನಲವರನ್ನು ಬಂಧಿಸಿದ್ದಾರೆ.

Home add -Advt

Related Articles

Back to top button