ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಸುಳ್ಯದ ಮೋಹನ್ ಚಿನ್ನಾಭರಣ ಮಳಿಗೆಯಲ್ಲಿ ಕಳುವು ಪ್ರಕರಣವನ್ನು ಬೇಧಿಸಿರುವ ಪೊಲಿಸರಿಗೆ ಕಳ್ಳರು ಶಾಕ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ಕಳ್ಳರು ಬರೋಬ್ಬರಿ 25 ಚಿನ್ನದ ಉಂಗುರಗಳನ್ನೆ ನುಂಗಿ ಪರಾರಿಗಾಯಲು ಯತ್ನಿಸಿದ್ದರು ಎಂಬ ವಿಷಯ ಬಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮೋಹನ್ ಚಿನ್ನಾಭರಣ ಮಳಿಗೆಯಲ್ಲಿ ಇತ್ತೀಚೆಗೆ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕೇರಳ ಮೂಲದ ಕಣ್ಣೂರು ಜಿಲ್ಲೆ ನಿವಾಸಿ ತಂಗಚ್ಚನ್ ಹಾಗೂ ತ್ರಿಶೂರ್ ನಿವಾಸಿ ಶಿಬು ಎಂಬುವವರನ್ನು ಬಂಧಿಸಿದ್ದರು.
ಬಂಧಿತರಿಂದ 6 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಆದರೆ ಉಳಿದ 2 ಲಕ್ಷ ಮೌಲ್ಯದ ಚಿನ್ನಾಭರಣದ ಬಗ್ಗೆ ಕಳ್ಳರು ಬಾಯ್ಬಿಟ್ಟಿರಲಿಲ್ಲ. ತೀವ್ರ ಹೊಟ್ಟೆನೋವಿಂದ ಬಳಲುತ್ತಿದ್ದ ಆರೋಪಿ ಶಿಬುನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಕ್ಸ್ ರೇ ಮಾಡಿದಾಗ ಶಿಬು ಹೊಟ್ಟೆಯಲ್ಲಿ ಚಿನ್ನದ ಉಂಗುರವಿರುವುದು ಪತ್ತೆಯಾಗಿದೆ. 25 ಉಂಗುರಗಳನ್ನು ಹೊರತೆಗೆಯಲಾಗಿದ್ದು, ಆರೋಪಿಯನ್ನು ಮತ್ತೆ ವಿಚಾರಣೆಗೊಳಪಡಿಸಿದಾಗ ಸಿಕ್ಕಿ ಬೀಳುವ ಭಯದಿಂದ ಉಂಗುರಗಳನ್ನು ಐಸ್ ಕ್ರೀಂ ಜೊತೆ ನುಂಗಿದ್ದಾಗಿ ಹೇಳಿದ್ದಾನೆ.
ಚಿಕ್ಕೋಡಿಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ