
ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು: ಇನ್ನು ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಶೇ.75 ಹಾಜರಾತಿ ಹೊಂದುವುದು ಕಡ್ಡಾಯಗೊಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಈ ನಿಯಮ ಜಾರಿಯಲ್ಲಿ ಇರಲಿಲ್ಲ. ಇದೀಗ ಸಾಂಕ್ರಾಮಿಕದ ಆರ್ಭಟ ತಗ್ಗಿ ಪರಿಸ್ಥಿತಿ ಸಹಜಗೊಂಡ ಹಿನ್ನೆಲೆಯಲ್ಲಿ ಮತ್ತೆ ಹಾಜರಾತಿ ಕಡ್ಡಾಯದ ನಿರ್ಧಾರ ತಳೆಯಲಾಗುತ್ತಿದೆ.
ಕೆಎಸ್ ಇಇಬಿ 1966ರ ಕಾಯ್ದೆಯ ನಿಯಮಾವಳಿ 37ರ ಪ್ರಕಾರ ಶೇ.75 ಹಾಜರಾತಿ ಕಡ್ಡಾಯವಾಗಿದೆ. ಆದರೆ ಇದಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಸಡಿಲಿಕೆ ನೀಡಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಆನ್ ಲೈನ್ ಪಾಠ ಆರಂಭವಾದ ನಂತರ ಶಾಲೆಯಿಂದ ದೂರ ಉಳಿದಿದ್ದರು. ಆಫ್ ಲೈನ್ ತರಗತಿಗಳು ಆರಂಭವಾದ ನಂತರವೂ ಈ ನಿಯಮಾವಳಿ ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ.
2022-23ನೇ ಸಾಲಿನ ತರಗತಿಗಳು ನಿರಾತಂಕವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಅಂಗ ರವಾನೆ; ಧಾರವಾಡದಿಂದ ಬೆಳಗಾವಿವರೆಗೆ ಝೀರೋ ಟ್ರಾಫಿಕ್ ನಿರ್ಮಾಣ