Latest

ಅ. 10 ರಂದು ಜಿತೋ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೈನ್ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಜೇಷನ್ (ಜಿತೋ) ಬೆಳಗಾವಿ ವಿಭಾಗದ 2021-22 ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭ ರವಿವಾರ ಅಕ್ಟೊಬರ 10 ರಂದು ಸಾಯಂಕಾಲ 5 ಗಂಟೆಗೆ ಉದ್ಯಮಬಾಗದ ಪೌಂಢ್ರೀ ಕ್ಲಸ್ಟರ್ ಸಭಾಗೃಹದಲ್ಲಿ ನಡೆಯಲಿದೆ.

ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕರಾಗಿ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಉಪಾಧ್ಯಕ್ಷರಾಗಿ , ಶ್ರೀ.ಆದಿನಾಥ ಸೌಹಾರ್ದ ಕೊ-ಆಪ್‌. ಕ್ರೆಡಿಟ್ ಸೋಸೈಟಿಯ ನಿರ್ದೇಶಕರಾಗಿ ಜೈನ್ ಸಮಾಜದ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಕ ಹನಮಣ್ಣವರ ಇವರನ್ನು ಜಿತೋ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಡಿಪ್ಲೋಮಾ ಆಟೋಮೊಬೈಲ್ ಇಂಜಿನಿಯರಿಂಗ್ ಪದವಿಧರರಾದ ಮತ್ತು ತಮ್ಮದೇ ಆಧ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯೆಂದು ಗುರುತಿಸಿಕೊಂಡಿರುವ ಅಮಿತ ದೋಷಿ ಅವರನ್ನು ಜಿತೋ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಬೆಳಗಾವಿಯ ಯುವ ಲೆಕ್ಕ ಪರಿಶೋಧಕ ಎಂದು ಗುರುತಿಸಿಕೊಂಡಿರುವ ಅಭಿಷೇಕ ಮಿರ್ಜಿ ಅವರನ್ನು ಜಿತೋ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ. ಅದರಂತೆ 2021-22 ನೇ ಸಾಲಿನ ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಮುಕೇಶ ಪೋರವಾಲ, ವೀರಧವಲ ಉಪಾಧ್ಯೆ, ಕಾರ್ಯದರ್ಶಿಯಾಗಿ ನೀತೀನ ಪೋರವಾಲ, ವಿಜಯಕುಮಾರ ಪಾಟೀಲ, ಜಂಟಿ ಖಜಾಂಚಿಯಾಗಿ ಆಕಾಶ ಪಾಟೀಲ, ಮತ್ತು ಸದಸ್ಯರಾಗಿ ಮಹೇಂದ್ರ ಪರಮಾರ, ಮತ್ತು ನೀತೀನ ಚಿಪ್ರೆ ಇವರು ಆಯ್ಕೆಯಾಗಿದ್ದಾರೆ.
​ಪಂತಬಾಳೇಕುಂದ್ರಿ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button