ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ನಡೆಸಿದ ಹಿಂಸಾಚಾರ 26/11ರ ಮುಂಬೈ ದಾಳಿಯನ್ನು ನೆನಪಿಸಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಜೆಎನ್‌ಯುನಲ್ಲಿ ನಡೆದ ದಾಳಿ ಕುರಿತು ಪ್ರತಿಕ್ರಿಯಿಸಿದ ಠಾಕ್ರೆ, ನಾನು ಟಿವಿಯಲ್ಲಿ ವರದಿಗಳನ್ನು ನೋಡುತ್ತಿದ್ದೆ. ಭಾನುವಾರ ರಾತ್ರಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೋಡಿದಾಗ ನನಗೆ 26/11 ಮುಂಬೈ ದಾಳಿಯ ನೆನಪಾಯಿತು. ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷತೆಯ ಭಾವ ಎದುರಿಸುತ್ತಿದ್ದಾರೆ. ಇಂದು ಭಯಭೀತಿಯಿಂದ ಬದುಕುವಂತಾಗಿದೆ. ಮಹಾರಾಷ್ಟ್ರದಲ್ಲಿ ಇಂಥ ಘಟನೆಗಳು ನಡೆದರೆ ನಾನು ಸಹಿಸುವುದಿಲ್ಲ ಕಿಡಿಕಾರಿದರು.
ಯುವಕರನ್ನು ರೊಚ್ಚಿಗೆಬ್ಬಿಸಿ ಬಾಂಬ್ ಹೊತ್ತಿಸಬೇಡಿ. ಒಂದೊಮ್ಮೆ ದೆಹಲಿ ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ವಿಫಲವಾದರೆ ಅವರೂ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದರ್ಥ. ದುಷ್ಕರ್ಮಿಗಳು ಕಬ್ಬಿಣದ ರಾಡ್, ಸುತ್ತಿಗೆ, ಬಡಿಗೆಗಳಿಂದ ಮುಸುಕು ಹಾಕಿಕೊಂಡು ದಾಳಿ ನಡೆಸಿರುವುದು ಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ