Kannada NewsKarnataka News

ಆಗಸ್ಟ್ 13 ರಂದು ಉದ್ಯೋಗ ಮೇಳ: ಇಲ್ಲಿದೆ ನೋಂದಣಿಗೆ ಲಿಂಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಆಗಸ್ಟ್ ೧೩ ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಬೆಳಗಾವಿಯ ಶಿವಬಸವ ನಗರದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜನೆ ಮಾಡಲಾಗಿದೆ.
ಜಿಲ್ಲೆಯ ಉದ್ಯೋಗಾಕಾಂಕ್ಷಿತ ಯುವಕ/ಯುವತಿಯರು ಅಗಸ್ಟ್ ೧೨ರ ಒಳಗಾಗಿ ಗೂಗಲ್ ಲಿಂಕ್  https://tinyurl.com/bgvjobmela ನಲ್ಲಿ ನೊಂದಾಯಿಸಿಕೊಂಡು, ಉದ್ಯೋಗಮೇಳದಲ್ಲಿ ತಮ್ಮ ವಿದ್ಯಾರ್ಹತೆ ದಾಖಲಾತಿಗಳೊಂದಿಗೆ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ  ಮೊಬೈಲ್ ಸಂಖ್ಯೆ ೮೦೭೩೪೦೧೧೬೪ (ಗೋಪಾಲ್) ಅವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಬಸವಪ್ರಭು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಓಲಂಪಿಕ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ

Home add -Advt

Related Articles

Back to top button