Karnataka NewsLatest

*ಎಸ್.ಎಸ್.ಎಲ್.ಸಿ ಪಾಸ್ ಆದವರು ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Home add -Advt

ಕಿರಿಯ ಸ್ಟೇಷನ್ ಪರಿಚಾರಕ: 433 ಹುದ್ದೆ
ಕಿರಿಯ ಪವರ್ ಮ್ಯಾನ್ :2542 ಹುದ್ದೆ

ವೇತನ: ಮೊದಲ ವರ್ಷ ತಿಂಗಳಿಗೆ 17,000 ರೂ, 2ನೇ ವರ್ಷ ತಿಂಗಳಿಗೆ 19,000, 3ನೇ ವರ್ಷ ತಿಂಗಳಿಗೆ 21,000 ರೂ. ಇರುತ್ತದೆ. 3 ವರ್ಷದ ತರಬೇತಿ ಪೂರೈಸಿದ ಬಳಿಕ ತಿಂಗಳಿಗೆ 28,550 ರೂ. ನಿಂದ 63,000 ರೂ ವರೆಗೂ ವೇತನ ನೀಡಲಾಗುವುದು.

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ:
ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯ ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆಯಾಗಿರಬೇಕು

ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿ 18 ವರ್ಷ ಪೂರೈಸಿರಬೇಕು.

ಅರ್ಜಿ ಸಲ್ಲಿಸಿದ ಅಹ್ಯರ್ಥಿ ಸಹನ ಶಕ್ತಿ ಪರೀಕ್ಷೆಯಲ್ಲಿ ಕನಿಷ್ಠ ಮೂರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು.

ಎಸ್.ಎಸ್.ಎಲ್.ಸಿ ಪರೀಕ್ಶೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವವರು ಆನ್ ಲೈನ್ ನಲ್ಲಿ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ಲಿಂಕ್ ಕ್ಲಿಕ್ ಮಾಡಿ ಅರ್ಜಿಯಲ್ಲಿನ ಅಂಶ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಅವಕಾಶ ಅಕ್ಟೋಬರ್.21 ಆರಂಭವಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್.20 ಕೊನೆ ದಿನಾಂಕ. ಶುಲ್ಕ ಪಾವತಿ ಕೊನೇ ದಿನಾಂಕ ನವೆಂಬರ್.25

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button