ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ಫೆಬ್ರವರಿ 24ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ನಡುವೆ ಮಲ್ಟಿಫ್ಲೆಕ್ಸ್ ಗಳಲ್ಲಿ ಸೌಂಡ್ ಸಮಸ್ಯೆಯಿಂದಾಗಿ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ ಎಂದು ಜೋಗಿ ಪ್ರೇಮ್ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿರುವ ಜೋಗಿ ಪ್ರೇಮ್, ಏಕ್ ಲವ್ ಯಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಹಾಡು ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗಾಗಿಯೇ ನಾನು ಒಂದುವರೆ ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಹೀಗಿರುವಾಗ ಮಲ್ಟಿಫ್ಲೆಕ್ಸ್ ಗಳಲ್ಲಿ ಹೆಚ್ಚಿನ ಸೌಂಡ್ ಕೊಡದೇ ಸೌಂಡ್ ಸಮಸ್ಯೆ ಮಾಡಿದರೆ ನಮ್ಮ ಸಿನಿಮಾ ಪ್ರೇಕ್ಷಕರ ಮೇಲೆ ಅಷ್ಟು ಪ್ರಭಾವ ಬೀರಲ್ಲ. ಹಾಗಾಗಿ ಏಕ್ ಲವ್ ಯಾ ಚಿತ್ರಕ್ಕೆ ಇಂತಹ ಸಮಸ್ಯೆಯಾಗದಂತೆ ಮನವಿ ಮಾಡಿದ್ದಾರೆ.
ನನ್ನ ನಿರ್ದೇಶನದ ವಿಲನ್ ಚಿತ್ರಕ್ಕೂ ಇಂತದ್ದೇ ಸಮಸ್ಯೆಯಾಗಿತ್ತು. ಕೇವಲ ನನ್ನ ಚಿತ್ರವೊಂದರ ಬಗ್ಗೆ ಮಾತ್ರ ನಾನು ಹೇಳುತ್ತಿಲ್ಲ, ಕನ್ನಡದ ಚಿತ್ರಗಳಿಗೆ ಈ ಸಮಸ್ಯೆಗಳಾಗುತ್ತಿವೆ ಎಂದು ಹೇಳಿದರು.
ಮಲ್ಟಿಫ್ಲೆಕ್ಸ್ ಗಳಲ್ಲಿ ಇಂಗ್ಲೀಷ್ ಚಿತ್ರಗಳಿಗೆ ಸೌಂಡ್ ಮಟ್ಟವನ್ನು 7 ಪಾಯಿಂಟ್ ಗೆ ಇಟ್ಟರೆ ತೆಲುಗು ಚಿತ್ರಕ್ಕೆ 6 ಪಾಯಿಂಟ್ ಸೌಂಡ್ ಕೊಡಲಾಗುತ್ತದೆ. ಆದರೆ ಕನ್ನಡದ ಸಿನಿಮಾಗಳಿಗೆ ಮಾತ್ರ ಕೇವಲ 4 ಪಾಯಿಂಟ್ ಸೌಂಡ್ ಕೊಡಲಾಗುತ್ತಿದೆ. ಇದರಿಂದ ಕನ್ನಡದ ಸಿನಿಮಾಗಳ ಸೌಂಡ್ ಎಫೆಕ್ಟ್ ಪ್ರಭಾವಶಾಲಿಯಾಗಿರುವುದಿಲ್ಲ ಎಂಬುದು ನಿರ್ದೇಶಕರ ಬೇಸರ. ಮುಂಬೈ, ಚೆನ್ನೈ ಮೊದಲಾದ ಕಡೆ ಯುಎಫ್ ಒ ಹಾಗೂ ಕ್ಯೂಬ್ ಕಚೇರಿಯಿದೆ. ಅವರವರ ಭಾಷೆಯವರು ಅವರದ್ದೇ ರಾಜ್ಯಗಳಲ್ಲಿ ಸಿನಿಮಾ ಅಪ್ ಲೋಡ್ ಮಾಡುತ್ತಾರೆ ಆದರೆ ಕರ್ನಾಟಕದಲ್ಲಿ ಯುಎಫ್ ಒ ಹಾಗೂ ಕ್ಯೂಬ್ ಕಚೇರಿ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎಂಬುದು ಜೋಗಿ ಪ್ರೇಮ್ ಅವರ ಅಸಮಾಧಾನ.
ಜೋಗಿ ಪ್ರೇಮ್ ನಿರ್ದೇಶನ, ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಮೂಡಿಬಂದಿರುವ ಏಕ್ ಲವ್ ಯಾ ಚಿತ್ರದಲ್ಲಿ ರಾಣಾ, ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ