ಕೃಷ್ಣಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಶೀಘ್ರ ನೀರು ಬಿಡಲು ಜೊಲ್ಲೆ ದಂಪತಿ ಮನವಿ ; ತಕ್ಷಣ ಸ್ಪಂದಿಸಿದ ಡಿಸಿಎಂ ಫಡ್ನವೀಸ್
ಪ್ರಗತಿವಾಹಿನಿ ಸುದ್ದಿ, ಮುಂಬೈ : ಶನಿವಾರ ಮುಂಬೈ ನಗರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಭೇಟಿಯಾಗಿ ಮಹಾರಾಷ್ಟ್ರದಿಂದ ಕೃಷ್ಣಾ, ವೇದಗಂಗಾ ನದಿ ಹಾಗೂ ಹಿಡಕಲ್ ಜಲಾಶಯಕ್ಕೆ ನೀರನ್ನು ಬಿಡುವಂತೆ ಮನವಿ ಸಲ್ಲಿಸಿದರು.
ಜಾನುವಾರುಗಳಿಗೆ ಹಾಗೂ ಜನರ ನಿತ್ಯ ಉಪಯೋಗಕ್ಕಾಗಿ ಹಾಗೂ ಕೃಷಿಗೆ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದು ಶೀಘ್ರ ಕೃಷ್ಣಾ ಹಾಗೂ ಹಿರಣ್ಯಕೇಶಿ ವೇದಾಗಂಗಾ ನದಿಗಳಿಗೆ ನೀರು ಬಿಡುವಂತೆ ಮನವಿಯನ್ನು ಕ್ಷೇತ್ರದ ಎಲ್ಲ ಶಾಸಕರು ನೀಡಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಫಡ್ನವೀಸ್, ಕೋಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ 3 ಟಿಎಮ್‌ಸಿ ನೀರು ಮತ್ತು ಚಿತ್ರಾ ಅಣೆಕಟ್ಟಿನಿಂದ ಹಿರಣ್ಯಕೇಶಿಗೆ 1 ಟಿ.ಎಂ.ಸಿ ನೀರು ಬಿಡುವಂತೆ ಸೂಚಿಸಿದರು.
ತಕ್ಷಣ ನೀರು ಬಿಡಲು ಕ್ರಮ ತೆಗೆದುಕೊಂಡ ಕ್ಷೇತ್ರದ ಜನರ ಪರವಾಗಿ ಫಡ್ನವೀಸ್ ಅಣ್ಣಾ ಸಾಹೇಬ ಅವರಿಗೆ ಜೊಲ್ಲೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ, ಶಾಸಕರಾದ ದುರ್ಯೋಧನ ಐಹೊಳೆ, ನಿಖೀಲ ಕತ್ತಿ, ರೈತ ಮೋರ್ಚಾ ಅಧ್ಯಕ್ಷ ಎಸ್.ಮುದಕಣ್ಣವರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ