
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಮಂಗಳವಾರ ರಾತ್ರಿ ಹೃದಯಾಘಾತದಿಂದ ಹಠಾತ್ ನಿಧನರಾದ ಸಂಪುಟ ಸಹೋದ್ಯೋಗಿಗಳು, ಆಹಾರ ಮತ್ತು ಅರಣ್ಯ ಸಚಿವರು, ಪಕ್ಷದ ಹಿರಿಯ ನಾಯಕರಾದ ಉಮೇಶ್ ಕತ್ತಿ ಅವರ ಬೆಲ್ಲದಬಾಗೇವಾಡಿಯ ನಿವಾಸಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಭೇಟಿ ನೀಡಿ, ಸಂತಾಪ ಸೂಚಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಾಜಿ ಸಂಸದರೂ, ಉಮೇಶ ಕತ್ತಿ ಅವರ ಸಹೋದರರೂ ಆಗಿರುವ ರಮೇಶ ಕತ್ತಿ, ಉಮೇಶ ಕತ್ತಿ ಪುತ್ರ ನಿಖಿಲ್, ರಮೇಶ ಕತ್ತಿ ಪುತ್ರರಾದ ಪೃಥ್ವಿ, ಪವನ್ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.
https://pragati.taskdun.com/karnataka-news/funeral-of-umesh-katti-with-full-state-honours/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ