ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ ೩೦-೩೫ ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ ನೀರಾವರಿ ಯೋಜನೆಯಿಂದ ಹಸಿರಿಕರಣವಾಗಲಿದೆ. ಗಂಗಾಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸಮೀಪದ ಸೌಂದಲಗಾ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೧.೫ ಕೋಟಿ ವೆಚ್ಚದಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಸಿವು ನೀಗಿಸುತ್ತಿರುವ ಅನ್ನದಾತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲು ವೇದಗಂಗಾ ನದಿಯಿಂದ ಶ್ರೀ ಅಂಬಾಬಾಯಿ ಗಂಗಾ ಕಲ್ಯಾಣ ಪೈಪ್ ಲೈನ್ ಮೂಲಕ ನೀರು ಹರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ರೈತರ ಸುಮಾರು ೪೦ ಎಕರೆ ಕೃಷಿ ಪ್ರದೇಶಗಳಿಗೆ ನೀರು ಹರಿಯಲಿದ್ದು, ಅನ್ನದಾತರ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ರೈತರ ಅನುಕೂಲಕ್ಕೆ ರಸ್ತೆ, ನೀರಾವರಿ ಯೋಜನೆ, ವಿದ್ಯುತ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ನೀಡಲಾಗಿದೆ. ಗ್ರಾಮದ ಗಣೇಶ ಮಂದಿರ ಕಟ್ಟಡಕ್ಕೆ ೨೫ ಲಕ್ಷ, ಅಂಗನವಾಡಿ ಕಟ್ಟಡಕ್ಕೆ ೧೫ ಲಕ್ಷ, ವಿಠ್ಠಲ ಬೀರದೇವ ಮಂದಿರಕ್ಕೆ ೧೦ ಲಕ್ಷ ಸೇರಿದಂತೆ ರೈತರ ನೀರಾವರಿ ಯೋಜನೆಗೆ ೧.೫ ಕೋಟಿ ನೀಡಲಾಗಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಕಳೆದ ೩೫ ವರ್ಷಗಳಿಂದ ರೈತರಿಗೆ ನೀರಿಲ್ಲದೆ ಸಮಸ್ಯೆಯಾಗಿತ್ತು. ನೀರಾವರಿ ಯೋಜನೆಯಿಂದ ರೈತರಿಗೆ ಲಾಭವಾಗಲಿದೆ. ನಾಗರಿಕರ ಬೇಡಿಕೆಗೆ ಸ್ಪಂದಿಸಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾಲಶುಗರ ಉಪಾಧ್ಯಕ್ಷ ಎಂ.ಪಿ.ಪಾಟೀಲ, ತಾ.ಪಂ ಮಾಜಿ ಉಪಾಧ್ಯಕ್ಷ ಗಣಪತಿ ಗಾಡಿವಡರ, ತಹಶಿಲ್ದಾರ ಪ್ರಕಾಶ ಗಾಯಕವಾಡ, ತಾ.ಪಂ ಸದಸ್ಯ ಅಣ್ಣಾಸಾಹೇಬ ಢವಣೆ, ಗ್ರಾ.ಪಂ ಅಧ್ಯಕ್ಷೆ ಅರ್ಚನಾ ಕೋಗನೋಳೆ, ಸದಸ್ಯೆ ರೇಖಾ ಪವಾರ, ಭಿಮರಾವ ಭಾನಸೆ, ಅಣ್ಣಾಸಾಹೇಬ ಪಾಟೀಲ, ಪ್ರಕಾಶ ಪಾಟೀಲ, ವಿಕ್ರಂ ಪಾಟೀಲ, ಪವನ ಪಾಟೀಲ, ರೋಜಾ ಜಮದಾಡೆ, ಸಂಜಯ ಲೋಹಾರ, ದಾದಾಸೋ ಕೋಗನೋಲೆ, ಶಿವಾಜಿ ಹತಕರ, ಸಂಗ್ರಾಮ ಪಾಟೀಲ, ರಘುನಾಥ ಮೋರೆ, ಶರದ ಚೌಗುಲೆ, ಗುತ್ತಿಗೆದಾರ ಸಂತೋಷ ಗಾಣಗೇರ ಹಾಜರಿದ್ದರು.
ಇದೇ ವೇಳೆ ಜೊಲ್ಲೆ ದಂಪತಿ ಚಕ್ಕಡಿಯಲ್ಲಿ ಸಂಚರಿಸುವ ಮೂಲಕ ರೈತರಲ್ಲಿ ನವೊಲ್ಲಾಸ ತುಂಬುವ ಕೆಲಸ ಮಾಡಿದರು.
ಅರಮನೆ ಪುನರ್ ನಿರ್ಮಾಣ ಸೇರಿ ಕಿತ್ತೂರು ಅಭಿವೃದ್ಧಿ ಕ್ರಿಯಾಯೋಜನೆಗೆ ರಾಜ್ಯಸರಕಾರ ಅನುಮೋದನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ