Belagavi NewsBelgaum NewsKarnataka News

*5 ದಿನಗಳ ಕೃಷಿ ಉತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 5 ದಿನಗಳವರೆಗೆ ನಡೆಯಲಿರುವ “ಕೃಷಿ ಉತ್ಸವ”ವನ್ನು ಅದೃಶ್ಯ ಕಾಸಿದ್ಧೇಶ್ವರ ಸ್ವಾಮೀಜಿ, ಪ್ರಾಣಲಿಂಗ ಸ್ವಾಮೀಜಿ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು.

‘ಜೊಲ್ಲೆ ದಂಪತಿಯ ನೇತೃತ್ವದಲ್ಲಿ ನಡೆಯುತ್ತಿರುವ ನಿಪ್ಪಾಣಿಯ ಕೃಷಿ ಉತ್ಸವವು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಲಿದೆ. ಈ ಕೃಷಿ ಉತ್ಸವ ರೈತರಿಗೆ ಮಾರ್ಗದರ್ಶಿಯಾಗಲಿದೆ’ ಎಂದು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕನೇರಿಯ ಸಿದ್ಧಗಿರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಜೊಲ್ಲೆ ಗ್ರುಪ್‍ದಿಂದ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ, ಬೀರೇಶ್ವರ ಸಹಕಾರ ಸಂಘ ಹಾಗೂ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಐದು ದಿನಗಳವರೆಗೆ ನಡೆಯುತ್ತಿರುವ “ಕೃಷಿ ಉತ್ಸವ – 2025”ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರತಿ ತಿಂಗಳು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಜೊಲ್ಲೆ ದಂಪತಿಯಲ್ಲಿ ಸಾಮಾಜಿ ಕಳಕಳಿ ಎದ್ದು ಕಾಣುತ್ತಿದೆ. ಈ ಕೃಷಿ ಉತ್ಸವದ ಮೂಲಕ ಅವರು ನೂತನ ತಂತ್ರಜ್ಞಾನದೊಂದಿಗೆ ರೈತರಿಗೆ ಉತ್ತೇಜನ ನೀಡಲು ಹಾಗೂ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ರಾಜಕಾರಣಕ್ಕಿಂತಲೂ ಉದ್ಯೋಗ, ಬೇಸಾಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವುದು ಅಣ್ಣಾಸಾಹೇಬ ಜೊಲ್ಲೆಯವರು ಮೈಗೂಡಿಸಿಕೊಂಡಿದ್ದಾರೆ. ಸಂಕೇಶ್ವರದ ಸಕ್ಕರೆ ಕಾರ್ಖಾನೆಯ ವೈಭವವನ್ನು ಮರಳಿ ತರಲಿದ್ದಾರೆ. ಜೊಲ್ಲೆ ದಂಪತಿ ಜನಸೇವೆಗಾಗಿ ಜನಿಸಿರುವುದು ಅವರ ಕಾರ್ಯದಿಂದ ತಿಳಿಯುತ್ತದೆ. ಮುರಿದು ಬಿದ್ದ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಒಂದು ಆದರ್ಶ ಸ್ಥಾಪಿಸುತ್ತಿದ್ದಾರೆ. ಇಲ್ಲಿ ಕೃಷಿ ವಸ್ತುಪ್ರದರ್ಶನ ವಿಶಿಷ್ಟವಾಗಿದ್ದು, ನಗರದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ‘ರೈತರು, ಮಹಿಳೆಯರು, ವೃದ್ಧರು ನೋಡಬೇಕಾದ ವಸ್ತು ಪ್ರದರ್ಶನ ಇದಾಗಿದೆ. ಉತ್ಸವದಲ್ಲಿ ಮನೊರಂಜನಾ ಕಾರ್ಯಕ್ರಮಗಳಿವೆ, ಮಕ್ಕಳಿಗಾಗಿ ಅಮ್ಯೂಜ್‍ಮೆಂಟ್ ಪಾರ್ಕ್ ಇದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಪ್ರದರ್ಶನಕ್ಕೆ ಭೇಟಿ ನೀಡಬೇಕು’ ಎಂದರು.

Home add -Advt

ನಿಡಸೋಸಿಯ ಸಿದ್ಧಸಂಸ್ಥಾನಮಠದ ನಿಜಲಿಂಗೇಶ್ವರ ಸ್ವಾಮೀಜಿ, ಮಾಜಿ ಶಾಸಕ ಸುರೇಶ ಹಳವಣಕರ, ಬಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.


ಆರಂಭದಲ್ಲಿ ಸ್ವಾಮೀಜಿ ಹಾಗೂ ಜೊಲ್ಲೆ ದಂಪತಿ ಎತ್ತಿನಗಾಡಿಯಲ್ಲಿ ಬಂದು ಕೃಷಿ ಉತ್ಸವದ ಕಮಾನಿನ ಉದ್ಘಾಟನೆ ನೆರವೇರಿಸಿದರು. ರೈತಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಜೊಲ್ಲೆ ಗ್ರುಪ್ ಸಂಸ್ಥಾಪಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷೆ ಸೋನಲ್ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಜ್ಯೋತಿಪ್ರಸಾದ ಜೊಲ್ಲೆ, ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ಮಾಜಿ ಸಂಸದ ಅಮರಸಿಂಹ ಪಾಟೀಲ, ಕ್ಯಾನರಾ ಬ್ಯಾಂಕ್ ಎಜಿಎಂ ಕಾರ್ತಿಕ, ಬೀರೇಶ್ವರ ಸಹಕಾರಿಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ದಿಗ್ವಿಜಯ ಸಿದ್ನಾಳ, ಕೃಷಿ ವಿಭಾಗದ ವಿವಿಧೆಡೆಯ ಅಧಿಕಾರಿಗಳಾದ ಎಲ್.ಆರ್. ವಿಜಯಶ್ರೀ, ಕೆ.ಆರ್. ಜಿನಾ, ಕಾರ್ತಿಕಕುಮಾರ ಚಾಂಡಿಲ್ಯ, ಚೇತನ ಬಿ., ಟೊಮ್ಯಾಟೋ ಎಫ್‍ಎಂನ ಮಯೂರ ತಾಂಬೇಕರ, ಪಿಎಲ್‍ಡಿ ಬ್ಯಾಂಕ್ ಚೇರಮನ್ ಎಸ್.ಎಸ್. ಢವಣೆ, ಕೆಓಎಫ್ ನಿರ್ದೇಶಕರು, ಮತ್ತಿತರರು ಉಪಸ್ಥಿತರಿದ್ದರು. ಜೊಲ್ಲೆ ಗ್ರುಪ್‍ನ ವೈಸ್-ಚೇರಮನ್ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Back to top button