
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –
ಮಹಾತ್ಮಾ ಗಾಂಧೀಜಿಯವರ 150 ನೇಯ ಜನ್ಮದಿನದ ಅಂಗವಾಗಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅ.31ರಂದು ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುವರು.
ಕುಡಚಿ ಶಾಸಕ ಪಿ.ರಾಜೀವ ಸಹ ಪಾಲ್ಗೊಳ್ಳಲಿದ್ದು, ಮುಗಳಖೋಡದಿಂದ ಕೋಳಿಗುಡ್ಡದವರೆಗೆ ಪಾದಯಾತ್ರೆ ನಡೆಯಲಿದೆ.
ಅದೇ ದಿನ ಮಧ್ಯಾಹ್ನ 1 ಗಂಟೆಗೆ ಹಾರೂಗೇರಿಯ ಶ್ರೀ ಚನ್ನವೃಷಬೇಂದ್ರ ಮಠದಲ್ಲಿ ಸಂಸದ ಜೊಲ್ಲೆ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀವ ಅವರಿಗೆ ಕುಡಚಿ ಮಂಡಲದ ಕಾರ್ಯಕರ್ತರಿಂದ ಸತ್ಕಾರ ಸಮಾರಂಭ ನಡೆಯಲಿದೆ.
ದೀಪೋತ್ಸವಕ್ಕೆ ಚಾಲನೆ

ಶಾಂತಿ ಜ್ಯೋತಿಪ್ರಸಾದ ಧಾಮ ಯರನಾಳ ಹೊಸೂರು ವತಿಯಿಂದ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಆಚಾರ್ಯ ಶ್ರೀ ಶಾಂತಿ ಸಾಗರ ಮುನಿ ದೀಕ್ಷಾ ಶತಮಾನೋತ್ಸವ ನಡೆಯಿತು.
“ಭಗವಾನ್ ಮಹಾವೀರ ನಿರ್ವಾಣ ಕಲ್ಯಾಣ ದೀಪಯೋತ್ಸವ” ಸಮಾರಂಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭಾಗವಹಿಸಿ, ಆಚಾರ್ಯ ಶ್ರೀ ಕುಲರತ್ನ ಭೂಷಣ ಮುನಿಗಳ ದರುಶನವನ್ನು ಪಡೆದು, ದೀಪೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಕ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ