ಜಾತಿ-ಪಕ್ಷದ ಭೇದಭಾವವಿಲ್ಲದೆ ಕೋಟ್ಯಂತರ ರೂ.ಗಳ ಅಭಿವೃದ್ಧಿ ಮೂಲಕ ಜೊಲ್ಲೆ ರಾಜ್ಯದಲ್ಲಿ ಮಾದರಿ – ಗೋಪಿಚಂದ ಪಡಳಕರ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಸಚಿವೆ ಶಶಿಕಲಾ ಜೊಲ್ಲೆ ಯಾವುದೇ ಜಾತಿ-ಭೇಧ, ಪಕ್ಷ-ಪಾತವಿಲ್ಲದೆ ಎಲ್ಲ ಸಮುದಾಯದವರೊಂದಿಗೆ ಸೇರಿ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಮಾಡಿ ರಾಜ್ಯದಲ್ಲಿ ಮಾದರಿಯಾಗಿದ್ದಾರೆ. ವಿರೋಧಕರು ನಡೆಸುತ್ತಿರುವ ಜಾತಿಯ ಆಧಾರದ ರಾಜಕಾರಣವನ್ನು ಸದೆಬಡಿದು ಶಶಿಕಲಾ ಜೊಲ್ಲೆಯವರನ್ನು ಬಹುಮತಗಳೊಂದಿಗೆ ಗೆಲ್ಲಿಸಿ’ ಎಂದು ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯ ಗೋಪಿಚಂದ ಪಡಳಕರ ಹೇಳಿದರು.
ತಾಲೂಕಿನ ಅಪ್ಪಾಚಿವಾಡಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರ ಜರುಗಿದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು. ’ಸಚಿವೆ ಜೊಲ್ಲೆ ಕ್ಷೇತ್ರದ ಸುಮಾರು ೩೫೦ ದೇವಾಲಯಗಳಿಗೆ ಜೀಣೋದ್ಧಾರ ಮಾಡಿಸಿದ್ದಾರೆ. ಜೊಲ್ಲೆ ಗ್ರುಪ್ ಅಡಿಯಲ್ಲಿ ಅನೇಕರಿಗೆ ಉದ್ಯೋಗವಕಾಶ ನೀಡಿದ್ದಾರೆ. ಕುರುಬರ ಸಮಾಜಕ್ಕಾಗಿ ಕಾಂಗ್ರೆಸ್ ಕೊಡುಗೆ ಏನೂ ಇಲ್ಲದಾಗಿದೆ. ಆದರೆ ಶಶಿಕಲಾ ಜೊಲ್ಲೆಯವರು ಈ ಸಮಾಜದ ಅಭಿವೃದ್ಧಿಗಾಗಿಯೂ ಪ್ರಯತ್ನಿಸಿದ್ದಾರೆ. ಆದರೆ ಇನ್ನಷ್ಟು ಅಭಿವೃದ್ಧಿಗಾಗಿ ಕಾರ್ಯಕರ್ತರೂ ಹಾಗೂ ಕುರುಬರ ಸಮಾಜವು ಅವರನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ’ಕ್ಷೇತ್ರದ ಎಲ್ಲ ಸಮುದಾಯದೊಂದಿಗೆ, ರೈತ, ಮಹಿಳಾ, ಯುವವರ್ಗ ಸೇರಿದಂತೆ ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಹಾಗೂ ಸಬಲೀಕರಣಕ್ಕೆ ಪ್ರಯತ್ನಿಸಿದ್ದೇನೆ. ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಬಜರಂಗ ದಳದ ನಿಷೇಧದ ಕುರಿತು ಹೇಳಿದೆ. ಇದು ಹಿಂದೂಗಳನ್ನು ಮುಗಿಸುವ ಹುನ್ನಾರ ಕಾಂಗ್ರೆಸ್ ನಡೆಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗರಿಗೆ ಅವರ ಜಾಗ ತೋರಿಸಿ’ ಎಂದರು.
ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ, ಸಿದ್ಧು ನರಾಟೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಜಿತ ಗೋಪಚಾಡೆ, ಪವನ ಪಾಟೀಲ, ರುಷಭ್ ಜೈನ್, ಮಲಗೊಂಡಾ ಪಙಆಟೀಲ, ಅಭಯ ಮಾನವಿ, ಬಸವಪ್ರಸಾದ ಜೊಲ್ಲೆ, ಗುರುಚರಣಸಿಂಗ, ಧೀರಜಸಿಂಗ ಸಿದ್ಧವೀರ, ಎಸ್.ಎಸ್. ಢವಣೆ, ಮೊದಲಾದವರು ಸೇರಿದಂತೆ ಅಪಾರ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ