*ಬಿಜೆಪಿ ಸೇರಿದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸ್ವಾಗತಿಸಿದ ಜೊಲ್ಲೆ*

ಕಾಂಗ್ರೆಸ್ ಕಾರ್ಯಕರ್ತರ ಆಗಮನದಿಂದ ಬಿಜೆಪಿಗೆ ಮತ್ತಷ್ಟು ಬಲ: ಶಶಿಕಲಾ ಜೊಲ್ಲೆ
*ಕಾರದಗಾ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ರಾ ಉಗಳೆ ಹಾಗೂ ಅವರ ತಂಡದ 50 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ 50ಕ್ಕೂ ಹೆಚ್ಚು ಅನ್ಯ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.
ಕಾರದಗಾ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ರಾ ಉಗಳೆ, ಸುದೀಪ ಉಗಳೆ, ಕಿರಣ ಟಕಳೆ, ರಜಿಂತ ಕದಂ, ಅಪ್ಪಾಸಾಬ ಖೋತ, ಆನಂದ ಚವ್ಹಾಣ, ಜ್ಯೋತಿಬಾ ಕಾಂಬಳೆ, ಸಾಗರ ಖೋತ, ನಾಗೇಶ ಉಗಳೆ, ಮಹಾಲಿಂಗ ಖೋತ, ಬಾಬಾಸಾಹೇಬ ಪಾಟೀಲ, ಪ್ರಥಮೇಶ ನೆಜೆ, ದೀಪಕ ಉಗಳೆ, ಅನಿಲ ಉಗಳೆ ಹಾಗೂ ಅವರ ತಂಡದ 50 ಕ್ಕೂ ಅಧಿಕ ಕಾರ್ಯಕರ್ತರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಅವರನ್ನು *ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ* ಹಾಗೂ *ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ* ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಎಂ. ಪಿ ಪಾಟೀಲ, ಸಂಚಾಲಕರಾದ ಶರದ ಜಂಗಟೆ, ಶ್ರೀಕಾಂತ ಬನ್ನೇ ಸಮಿತ ಸಾಸನೆ, ಬಾಳಾಸಾಹೇಬ ಕದಂ,ಪ್ರಕಾಶ ಶಿಂಧೆ, ಯುನೂಸ್ ಮುಲ್ಲಾ,ಸಾಗರ ದೇಸಾಯಿ, ದಿಲೀಪ ಖೋತ, ಪ್ರಕಾಶ ಶಿಂಧೆ, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



