Cancer Hospital 2
Bottom Add. 3

*ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಕೇಸ್; ಐವರು ಅಪರಾಧಿಗಳು; ಕೋರ್ಟ್ ತೀರ್ಪು*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ದೋಷಿಗಳು ಎಂದು ದೆಹಲಿಯ ಸಾಕೇತ್ ಕೋರ್ಟ್ ತೀರ್ಪು ನೀಡಿದೆ.

2008ರ ಸೆಪ್ಟೆಂಬರ್ 30ರಂದು ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದ 25 ವರ್ಷದ ಸೌಮ್ಯ ವಿಶ್ವನಾಥನ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

ಘಟನೆ ನಡೆದು ಬರೋಬ್ಬರಿ 15 ವರ್ಷಗಳ ಬಳಿಕ ನ್ಯಾಯಾಲಯ ಐವರು ಅಪರಾಧಿಗಳು ಎಂದು ಘೋಷಿಸಿದೆ. ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲಿಕ್, ಅಜಯ್ ಕುಮಾರ್, ಹಾಗೂ ಅಜಯ್ ಸೇಥಿ ದೋಷಿಗಳು. ಇವರೆಲ್ಲರೂ ಮಾರ್ಚ್ 2009ರಿಂದ ಬಂಧನದಲ್ಲಿದ್ದಾರೆ. 2009ರಲ್ಲಿ ಬಿಪಿಒ ಉದ್ಯೋಗಿ ಜಿಗಿಷಾ ಹತ್ಯೆ ಪ್ರಕರಣದ ತನಿಖೆ ವೇಳೆ ಆರೋಪಿಯೊಬ್ಬ ಪರ್ತಕರ್ತೆಯ ಹತ್ಯೆಯಲ್ಲಿ ಭಾಗಿಯಾಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಇದು ಪತ್ರಕರ್ತೆ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಲು ಸಹಕಾರಿಯಾಗಿತ್ತು ಎಂದು ತಿಳಿದುಬಂದಿದೆ.


Bottom Add3
Bottom Ad 2

You cannot copy content of this page