Kannada NewsLatest

ಶೆಂಡೂರ್ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಭೇದವಿಲ್ಲದೆ ಸರಕಾರದಿಂದ ಬಂದ ಅನುದಾನವನ್ನು ಅಗತ್ಯವಿದ್ದೆಡೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದ್ದು ನಾಗರಿಕರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹಾರ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ನಿಪ್ಪಾಣಿ ತಾಲೂಕಿನ ಶೆಂಡೂರ್ ಗ್ರಾಮದ ನಾಯಕ ಗಲ್ಲಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ (MLC Fund) ಹಣ ಮಂಜೂರು ಮಾಡಿಸಿ, ಇಂದು ಕಾಂಕ್ರೀಟ್ ರಸ್ತೆ ನಿರ್ಮಾಣ  ಕಾಮಗಾರಿಗಳಿಗೆ ಭೂಮಿ ಪೂಜೆ ಕೈಗೊಂಡು ಅವರು ಮಾತನಾಡಿದರು.

Home add -Advt

ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಿ ಕೈಗೊಳ್ಳಲಾಗುತ್ತಿದ್ದು ಬಹುವರ್ಷ ತಾಳಿಕೆ ಬರುವ ಈ ಕಾಂಕ್ರೀಟ್ ರಸ್ತೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಂಕಜ ಪಾಟೀಲ, ರಾಜೇಶ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ನಾಮದೇವ ದೊನಪೊಲಿ, ಬಾಜಿರಾವ್ ಭೋಸ್ಲೆ, ಸುಜಯ ಪಾಟೀಲ, ಬಸು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

*ಸಿಎಂ ಬೊಮ್ಮಾಯಿ ದಿಢೀರ್ ದೆಹಲಿಗೆ*

https://pragati.taskdun.com/cm-basavaraj-bommaidelhivisit/

ಬೆಳಗಾವಿ ಮೇಯರ್ ಯಾರಾಗಲಿದ್ದಾರೆ?: ಒಂದೇ ಮಾತಿನಲ್ಲಿ ಉತ್ತರಿಸಿದ ಶಾಸಕ ಅಭಯ ಪಾಟೀಲ!

https://pragati.taskdun.com/who-will-be-the-mayor-of-belgaum-mla-abhay-patil-answered-in-one-word/

*ಏಕಾಏಕಿ ಪ್ರವಹಿಸಿದ ವಿದ್ಯುತ್; ಇಬ್ಬರ ದುರ್ಮರಣ*

https://pragati.taskdun.com/electrick-shocktwo-deathbangalore/

Related Articles

Back to top button