Belagavi NewsBelgaum NewsKannada NewsKarnataka NewsLatest
*ಹಿರಿಯ ಪತ್ರಕರ್ತ ಸುಧಾಕರ ಕೋಳಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಚಿಕ್ಕೋಡಿಯ ಹಿರಿಯ ಪತ್ರಕರ್ತ ಸುಧಾಕರ ಕೋಳಿ (44) ಶನಿವಾರ ನಿಧನರಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಹಿರೇಕೊಡಿಯವರಾದ ಅವರು ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎರಡುವರೆ ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ಅವರು ಕೆಲಸ ನಿರ್ವಹಿಸಿದ್ದರು.



