ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಪರ ಬಲವಂತದ ಸಹಿ ಸಂಗ್ರಹ ಹಾಗೂ ವಿದ್ಯಾರ್ಥಿನಿಯರೊಂದಿಗೆ ವಾಗ್ವಾದಕ್ಕಿಳಿದು ಧಮ್ಕಿ ಹಾಕಿದ ಬಿಜೆಪಿ ಕಾರ್ಯಕರ್ತರ ಕ್ರಮ ಖಂಡಿಸಿ ಬೆಂಗಳೂರಿನ ಜ್ಯೋತಿನಿವಾಸ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಸಿಎಎ ಪರ ಜಾಗೃತಿ ಹೆಸರಿನಲ್ಲಿ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಆವರಣಕ್ಕೆ ಆವರಣಕ್ಕೆ ಬಂದ ಬಿಜೆಪಿ ಕಾರ್ಯಕರ್ತರು, ಕಾಲೇಜಿನ ಆವರಣದ ಗೋಡೆ ಮೇಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕರ ಚಿತ್ರವಿರುವ ‘ಇಂಡಿಯಾ ಸಪೋರ್ಟ್ ಸಿಎಎ’ ಎಂಬ ಬ್ಯಾನರ್ ಹಾಕಿದ್ದರು. ಅಲ್ಲದೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ಸಿಎಎ ಪರ ಸಹಿ ಹಾಕುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದಾಗ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಪಾಕಿಸ್ತಾನ ಎಂದು ಘೋಷಣೆ ಕೂಗಲು ಆರಭಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯರು ಕಾಲೇಜು ಆವರಣದಲ್ಲಿ ರಾಜಕೀಯ ಬಿತ್ತಿಪತ್ರ ಅಂಟಿಸಿದ್ದೂ ಅಲ್ಲದೇ ಈ ರೀತಿ ಬಲವಂತದ ಸಹಿ ಸಂಗ್ರಹ ಮಾಡುತ್ತಿರುವ ಕ್ರಮ ತಪ್ಪು ಎಂದು ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಯರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ವಾಗ್ವಾದವೇ ನಡೆದಿದ್ದು, ಕಾರ್ಯಕರ್ತರು ವಿದ್ಯಾರ್ಥಿಯರಿಗೆ ಧಮ್ಕಿ ಹಾಕಿದ್ದಾರೆ. ಈ ಕುರಿತ ವಿಡೀಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಜೆಪಿ ನಾಯಕರ ಈ ವರ್ತನೆ ಖಂಡಿಸಿರುವ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿನಿಯರು ಇಂದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಿಎಎ ವಿರುದ್ಧ ಭಿತ್ತಿ ಪತ್ರಗಳೊಂದಿಗೆ ಪ್ರತಿಭಟನೆಯಾಲ್ಲಿ ಭಾಗವಹಿಸಿದ್ದಾರೆ. ಗಲಾಟೆ ಸಂಬಂಧ ವಿದ್ಯಾರ್ಥಿನಿಯರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರಿಗೆ ದೂರು ಕೊಟ್ಟಿದ್ಧಾರೆ. ವಿದ್ಯಾರ್ಥಿನಿಯರ ದೂರು ಪಡೆದಿರುವ ಡಿಸಿಪಿ ಇಶಾ ಪಂತ್ ಅವರು ಕಾಲೇಜಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ