
ಜೊಲ್ಲೆ ಕುಟುಂಬದ ಕಾರ್ಯ ಶ್ಲಾಘನೀಯ – ಕವಲುಗುಡ್ಡ ಅಮರೇಶ್ವರ ಮಹಾಸ್ವಾಮಿಗಳು
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹುಟ್ಟು-ಸಾವಿನ ಮಧ್ಯೆ ಸಮಾಜದ ಏಳ್ಳೆಗಾಗಿ ಶ್ರಮಿಸುತ್ತಿರುವ ಜೊಲ್ಲೆ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ. ಕಷ್ಟದಲ್ಲಿದ್ದವರಿ ಗೆ ಸಹಾಯ, ಹಸಿದವನಿಗೆ ಅನ್ನ ನೀಡುವುದು ಬಸವಾದಿಶರಣರ ತತ್ವದಡಿ ಜೊಲ್ಲೆ ಪರಿವಾರ ಕಾಯಕ ಮುಂದುವರೆಯಬೇಕು ಎಂದು ಕವಲುಗುಡ್ಡ ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಿದ ೧೦ ನೆಯ ಪ್ರೇರಣಾ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರು ಬದುಕಿನ ಜೀವನ ಪಾಠದಲ್ಲಿ ಅಬ್ದುಲ್ ಕಲಾಂ ಅವರ ಜೀವನಾದರ್ಶ ಬೆಳೆಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದರು.
ಬೀದರಿನ ಗಂಗಾಂಬಿಕಾತಾಯಿ ಮಾತನಾಡಿ, ಜ್ಯೋತಿಪ್ರಸಾದ ಜೊಲ್ಲೆ ಇಡಿ ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ. ಅವರ ಮುಂದಾಳುತ್ವದಲ್ಲಿ ಜೊಲ್ಲೆ ಪರಿವಾರ ಸಮಾಜ ಸೇವೆಯಲ್ಲಿ ಗಣನೀಯವಾಗಿ ಬೆಳವಣಿಗೆ ಕಾಣುತ್ತಿದೆ. ದೇಶದ ಪ್ರಧಾನಿ ಮೋದಿ ಅವರು ಕಾಶಿ ಅಭಿಮುಕ್ತ ಕ್ಷೇತ್ರ ಮಾಡಿದ್ದಾರೆ. ಅದರಂತೆ ಅನುಭವ ಮಂಟಪ ಅಂತರಾಷ್ಟ್ರೀಯ ಮಾನ್ಯತೆಗೆ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಒತ್ತಾಯಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜ್ಯೋತಿಪ್ರಸಾದ ನಮ್ಮ ಸಂಸ್ಥೆಯ ಪ್ರೇರಣಾ ಶಕ್ತಿಯಾಗಿದ್ದರಿಂದಾಗಿ ನಮ್ಮ ಸಮಾಜಿಕ ಕಾರ್ಯಕ್ರಮದಲ್ಲಿ ಇನ್ನಷ್ಟು ಹುಮ್ಮಸ್ಸು
ತುಂಬಿದಂತಾಗಿದೆ. ಕಷ್ಟ ಸಂದರ್ಭದಲ್ಲಿ ಅಲ್ಪಸೇವೆಯೂ ಸಮಾಜದ ಮಹೋನ್ನತ ಕಾರ್ಯ. ಸಮಾಜ ಸೇವೆಯ ಪುಣ್ಯದ ಫಲ ನಮ್ಮ ಶಕ್ತಿ ಹೆಚ್ಚಿಸಿದೆ. ಶಿಕ್ಷಣದ ಜೊತೆಗೆ ಭಾರತಿಯ ಸಂಸ್ಕಾರ ಬಹುಮುಖ್ಯವಾಗಿದೆ. ಅಂತಹ ಶಿಕ್ಷಣವನ್ನು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ ಎಂದರು.
ಮಹೀಷಾನಂದ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವಸ್ವಾಮೀಜಿ ಮಾತನಾಡಿದರು. ಸಾನಿಧ್ಯವನ್ನು ಚಿಂಚಣಿಮಠದ ಅಲ್ಲಮಪ್ರಭು ಸ್ವಾಮೀಜಿಸಿ ವಹಿಸಿ ಮಾತನಾಡಿದರು.
ಪೊಗತ್ಯನಟ್ಟಿ ರಾಷ್ಟ್ರೀಯ ರೈತ ಪ್ರಶಸ್ತಿ ಪುರಸ್ಕೃತ ಶಿವಗೌಡ ಪಾಟೀಲ ದಂಪತಿಗಳಿಗೆ ಪ್ರೇರಣಾ ಉತ್ಸವ ವೇದಿಕೆಯ ಮೇಲೆ ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ನಿಪ್ಪಾಣಿ ಪ್ರಾಣಲಿಂಗ ಮಹಾಸ್ವಾಮಿಗಳು, ಜೋಡಕುರಳಿ ಮಠದ ಚಿದ್ಘಾನಂದ ಮಹಾಸ್ವಾಮಿಗಳು, ಚಳ್ಳಕೆರೆ ಮಠದ
ಸ್ವಾಮಿಗಳು, ಒಂಭತೇಶ್ವರ ಮಠದ ಅಭಿನವ ಸ್ವಾಮಿಗಳು, ಅಭಿನವ ಬ್ರಹ್ಮಾನಂದ ಸ್ವಾಮಿಗಳು, ಕೃಪಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೆಬ ಜೊಲ್ಲೆ, ಬಿ.ಟಿ ಬೆನಕಟ್ಟಿ, ಶಿವಗೌಡಾ ಪಾಟೀಲ, ದಯಾನಂದ ಅನಗೌಂಡ, ಜಯಾನಂದ ಜಾಧವ, ಸಿದ್ರಾಮ ಗಡದೆ, ಲಕ್ಷ್ಮಣ ಕಬಾಡೆ, ಸದಾಶಿವ ಕೋಕನೆ, ಚಂದ್ರಕಾಂತ ಕೋಥ, ಬಿ.ಎನ್ ಮಾಳಿ, ಮಹಾದೇವಿ ಹಲಕಾಟೆ, ಮಂಗಳಾ ಜೊಲ್ಲೆ, ಜಯವಂತ ಭಾಟಲೆ ಮುಂತಾದವರು ಇದ್ದರು. ಬಸವಜ್ಯೋತಿ ಯುತ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
ಬೆಳಗಾವಿ, ನಿಪ್ಪಾಣಿಯಲ್ಲಿ ಎಸಿಬಿ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ