Politics
*ಹನಿಟ್ರ್ಯಾಪ್ ಪ್ರಕರಣ: ಲಾಯರ್ ಎಂದು ಹೇಳಿಕೂಂಡು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು: ಸಚಿವ ರಾಜಣ್ಣ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಗೆ ಯತ್ನ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದರೂ ಸ್ಪಷ್ಟವಾಗಿ ಹೇಳಿಕೆ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದ ಸಚಿವರು, ಇದೀಗ ತುಮಕೂರಿನಲ್ಲಿ ಬಾಯ್ಬಿಟ್ಟಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಹನಿಟ್ರ್ಯಾಪ್ ಗೆ ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು.
ಎರಡು ಬಾರಿ ಬಂದ ಹುಡುಗಿಯರು ಬೇರೆ ಬೇರೆ, ಎರಡನೇ ಬಾರಿ ಬಂದವಳು ತಾನು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದಳು ಎಂದಿದ್ದಾರೆ.
ಆಕೆ ಯಾರು ಎಂಬುದು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಸಿಸಿಟಿವಿ ಕೂಡ ಇರಲಿಲ್ಲ. ತಾನು ಹೈಕೋರ್ಟ್ ಲಾಯರ್, ನಿಮ್ಮ ಬಳಿ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿದ್ದಳು ಎಂದಿದ್ದಾರೆ.
ಪ್ರಕರಣದ ಬಗ್ಗೆ ಇಂದು ದೂರು ನೀಡಿತ್ತೇನೆ. ಅಪರಿಚತ ವ್ಯಕ್ತಿಯಿಂದ ಹನಿಟ್ರ್ಯಾಪ್ ಯತ್ನ ಎಂದು ದಾಖಲಿಸುತ್ತೇನೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಗಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದರು.